ಭಾರತ, ಏಪ್ರಿಲ್ 22 -- ಗಂಗಾವತಿ: ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕು ಆನೆಗೊಂದಿಯಲ್ಲಿರುವ ವಿಜಯನಗರ ಸಾಮ್ರಾಜ್ಯದ ರಾಜ ಶ್ರೀಕೃಷ್ಣದೇವರಾಯ ಸ್ಮಾರಕ ನಿರ್ಲಕ್ಷಿಸಲ್ಪಟ್ಟ ಕಾರಣ ಅಲ್ಲಿ ನಿರಂತರ ಪ್ರಾಣಿವಧೆ ನಡೆಯುತ್ತಿತ್ತು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆದ ಬಳಿಕ ಸರ್ಕಾರ ಎಚ್ಚೆತ್ತುಕೊಂಡಿದೆ. ಸ್ಮಾರಕ ಸ್ವಚ್ಛಗೊಳಿಸಿ ಸೂಕ್ತ ಭದ್ರತೆಯನ್ನು ಒದಗಿಸಿದೆ. ಸ್ಮಾರಕದ ಮೇಲೆ ಪ್ರಾಣಿ ವಧೆ ಮಾಡಿದ ವಿಡಿಯೊ ಸಾಮಾಜಿಕ ತಾಣಗಳಲ್ಲಿ ಹರಿದಾಡಿತ್ತು. ಇದನ್ನು ಗಮನಿಸಿದ ಮುಖ್ಯಮಂತ್ರಿಯವರ ವಿಶೇಷ ಕರ್ತವ್ಯಾಧಿಕಾರಿ ಕೆ. ವೈಷ್ಣವಿ ಅವರು ಇಲಾಖೆಗೆ ವರದಿ ಕೇಳಿದ್ದರು. ಇನ್ನೊಂದೆಡೆ, ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಈ ವಿಡಿಯೋ ಇರುವ ಟ್ವೀಟ್ ಅನ್ನು ಶೇರ್ ಮಾಡಿ, ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದರು.

ಆನೆಗೊಂದಿಯಲ್ಲಿರುವ 64 ಕಂಬಗಳ ಮಂಟಪ ವಿಜಯನಗರ ಸಾಮ್ರಾಜ್ಯದ ರಾಜ ಶ್ರೀಕೃಷ್ಣದೇವ ರಾಯನ ಸಮಾಧಿ ಸ್ಮಾರಕವಾಗಿದ್ದು ನಿರ್ಲಕ್ಷಿತ ತಾಣವಾಗಿತ್ತು. ಇಲ್ಲಿ ಕೆಲವು ಪ್ರಾಣಿ ವಧೆ ಮಾಡುತ್ತಿರುವ ವಿಡಿಯ...