ಭಾರತ, ಮಾರ್ಚ್ 11 -- ಬೆಂಗಳೂರು: ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕು ಆನೆಗೊಂದಿ ಸಮೀಪ ವಿದೇಶಿ ಮಹಿಳೆ ಸೇರಿ ಇಬ್ಬರು ಮಹಿಳೆಯರ ಮೇಲೆ ಅತ್ಯಾಚಾರ ಮತ್ತು ಪ್ರವಾಸಿಗನ ಹತ್ಯೆ ಪ್ರಕರಣ ದೇಶ, ವಿದೇಶಗಳ ಗಮನಸೆಳೆದಿದೆ. ಮೂರು ಸ್ಥಳೀಯರು ಈ ಕೃತ್ಯವೆಸಗಿದ್ದು ಖಚಿತವಾದ ಕೂಡಲೇ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಇಬ್ಬರನ್ನು ಬಂಧಿಸಿದರು. ಮೂರನೇ ಆರೋಪಿಯನ್ನು ಚೆನ್ನೈನಲ್ಲಿ ಬಂಧಿಸಿದ್ದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಈ ನಡುವೆ, ಗಂಗಾವತಿ ಮತ್ತು ಸುತ್ತಮುತ್ತ ಇರುವ ಹೋಮ್‌ ಸ್ಟೇ ಹಾಗೂ ಲಾಡ್ಜ್‌ಗಳಲ್ಲಿ ನಿಯಮ ಪಾಲನೆ ಬಿಗಿಗೊಳಿಸಿದ್ದು, ಪೊಲೀಸರು ತಪಾಸಣೆ ತೀವ್ರಗೊಳಿಸಿದ್ದಾರೆ.

1) ಗಂಗಾವತಿ ಸುತ್ತಮುತ್ತ ತಪಾಸಣೆ ಬಿಗಿ: ಹಂಪಿ ಸಮೀಪ ಗಂಗಾವತಿಯ ಆನೆಗೊಂದಿ ಹತ್ತಿರ ಪ್ರವಾಸಿ ಮಹಿಳೆ ಹಾಗೂ ಹೋಂ ಸ್ಟೇ ಮಾಲೀಕಳ ಮೇಲೆ ಅತ್ಯಾಚಾರ, ಪ್ರವಾಸಿಗನ ಹತ್ಯೆ ಪ್ರಕರಣದ ಬಳಿಕ ಪೊಲೀಸರು ಕೊಪ್ಪಳ ಜಿಲ್ಲೆಯಲ್ಲಿ ಪಹರೆ ಬಿಗಿಗೊಳಿಸಿದ್ದಾರೆ. ಪಾರಂಪರಿಕ ತಾಣ, ಹೋಂ ಸ್ಟೇ ಹಾಗೂ ಲಾಡ್ಜ್‌ಗಳಿಗೆ ಪೊಲೀಸರು ದಾಳಿ ನಡೆಸಿದ್ದು, ನಿಯಮ ಪಾಲನೆ ...