Bengaluru, ಮೇ 13 -- ಬೆಂಗಳೂರು: ಭಾರತೀಯ ಕೃಷಿ ಸಂಶೋಧನಾ ಮಂಡಳಿಯ (ಐಸಿಎಆರ್) ನಿವೃತ್ತ ನಿರ್ದೇಶಕ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ಪ್ರೊ. ಸುಬ್ಬಣ್ಣ ಅಯ್ಯಪ್ಪನ್ ಅವರ ನಿಗೂಢ ಸಾವನ್ನು ಕುರಿತು ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ಸಿಬಿಐ ತನಿಖೆ ನಡೆಸಬೇಕು ಎಂದು ಐಸಿಎಆರ್ ಮಾಜಿ ಸದಸ್ಯ ವೇಣುಗೋಪಾಲ್ ಬಾದರವಾಡ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಅಯ್ಯಪ್ಪನ್ ಅವರ ಸಂಶಯಾಸ್ಪದ ಸಾವನ್ನು ಕುರಿತು ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪ್ರತ್ಯೇಕ ಪತ್ರ ಬರೆದು ತನಿಖೆಗೆ ಆಗ್ರಹಪಡಿಸಿದ್ದಾರೆ. ಅಯ್ಯಪ್ಪನ್ ಅವರ ಸಾವು ಅತೀವ ನೋವನ್ನುಂಟು ಮಾಡಿದೆ. ನದಿ ದಡದಲ್ಲಿ ಅವರ ದ್ವಿಚಕ್ರ ವಾಹನ ಸಿಕ್ಕಿದೆ. ಹಾಗಾಗಿ, ಅವರ ಸಾವು ಹಲವಾರು ಅನುಮಾನಗಳನ್ನು ಹುಟ್ಟು ಹಾಕಿದೆ. ಆದ್ದರಿಂದ ಸಿಬಿಐ ತನಿಖೆಯ ಮೂಲಕ ಸತ್ಯವನ್ನು ಬಯಲಿಗೆಳೆಯಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
ಅವರ ಸಾವನ್ನು ಕುರಿತು ಮತ್ತಷ್ಟು ಸಂಗತಿಗಳನ್ನು ಬಾದವಾಡ ಹಂಚಿಕೊಂಡಿದ್ದಾರೆ. ಅಯ್ಯಪ್ಪನ್ ಅವರ ಸಾವಿಗೂ ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.