Bengaluru, ಫೆಬ್ರವರಿ 2 -- Kannada Television: ಕನ್ನಡ ಕಿರುತೆರೆಯಲ್ಲಿ ತಮ್ಮ ಸೀರಿಯಲ್‌ಗಳಿಂದಲೇ ಮೋಡಿ ಮಾಡಿದ, ಹತ್ತಾರು ಸೀರಿಯಲ್‌ ನಿರ್ಮಾಣ, ನಿರ್ದೇಶನ ಮಾಡಿದ್ದ ಕೆ. ಎಸ್‌ ರಾಮ್‌ಜಿ ವಿರುದ್ಧ ಇದೀಗ ಗಂಭೀರ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಸ್ವತಃ ಆ ಆರೋಪ ಸುಳ್ಳು ಎಂದು ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಅಷ್ಟಕ್ಕೂ ಆಗಿದ್ದೇನು? ಕೇಳಿ ಬಂದ ಆರೋಪವಾದರೂ ಏನು? ಇಲ್ಲಿದೆ ವಿವರ.

ಕನ್ನಡ ಕಿರುತೆರೆಯಲ್ಲಿ ಬ್ಲಾಕ್‌ ಬಸ್ಟರ್‌ ಧಾರಾವಾಹಿಗಳ ಸರದಾರ ಎಂದೇ ಕರೆಸಿಕೊಂಡಿದ್ದಾರೆ ಕೆ. ಎಸ್‌ ರಾಮ್‌ಜಿ. 'ಪುಟ್ಟಗೌರಿ ಮದುವೆ', 'ನಾಗಿಣಿ 2', 'ಗೀತಾ', 'ರಾಮಾಚಾರಿ' ಸೇರಿ ಹಲವು ಸೀರಿಯಲ್‌ಗಳನ್ನು ನೀಡಿದ್ದಾರೆ ರಾಮ್‌ಜಿ. ಇದೀಗ ಇದೇ ರಾಮ್‌ಜಿ ವಿರುದ್ಧ ಗಂಭೀರ ಆರೋಪವೊಂದು ಕೇಳಿ ಬಂದ ಹಿನ್ನೆಲೆಯಲ್ಲಿ, ಅಪಪ್ರಚಾರ ಮತ್ತು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ದೂರಿರುವ ಅವರು, ಬೆಂಗಳೂರಿನ ಸೈಬರ್‌ ಕ್ರೈಂ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಷ್ಟಕ್ಕೂ ಆಗಿದ್ದೇನು? ಸೋಷಿಯಲ್‌ ಮೀಡಿಯಾದಲ್ಲಿ ರಾಮ್‌ಜಿ ವ...