ಭಾರತ, ಮಾರ್ಚ್ 16 -- ಕಳೆದ ವರ್ಷ ನವೆಂಬರ್ 12 ರಂದು ಅಭಿಷೇಕ್ ಮತ್ತು ಅವಿವಾಗೆ ಮಗು ಜನಿಸಿತ್ತು. ಇಷ್ಟು ದಿನಗಳ ಕಾಲ ಸಾಕಷ್ಟು ಜನ ಮಗುವಿನ ಹೆಸರೇನಿರಬಹುದು ಎಂದು ಅಂದಾಜಿಸುತ್ತಲೇ ಇದ್ದರು. ನಟ ಅಂಬರೀಶ್ ಅವರ ಮೊಮ್ಮಗನ ಹೆಸರೇನೆಂದು ತಿಳಿದುಕೊಳ್ಳುವ ಕಾತರ ನಿಮಗೂ ಇರಬಹುದು. ಇಂದು ಮಾರ್ಚ್ 16ರಂದು ಖಾಸಗಿ ಹೋಟೆಲ್‌ನಲ್ಲಿ ಅದ್ದೂರಿಯಾಗಿ ನಾಮಕರಣ ನಡೆದಿದೆ. ಸಿನಿ ತಾರೆಯರು ಕೂಡ ಆಗಮಿಸಿ ಅಂಬಿ ಮೊಮ್ಮಗನನ್ನು ಕಣ್ತುಂಬಿಕೊಂಡು ಹಾರೈಸಿದ್ದಾರೆ.

ಕುಟುಂಬಸ್ಥರು, ಸಂಬಂಧಿಕರು, ಹಿತೈಷಿಗಳು, ರಾಜಕೀಯ ಮತ್ತು ಚಿತ್ರರಂಗದ ಹಲವರು ನಾಮಕರಣದಲ್ಲಿ ಭಾಗಿಯಾಗಿದ್ದರು. 'ರೆಬೆಲ್‌ ಸ್ಟಾರ್‌' ಅಂಬರೀಶ್‌ ಮತ್ತು ಸುಮಲತಾ ಅವರ ಮೊಮ್ಮಗನಿಗೆ ಅಂಬರೀಶ್‌ ಅವರ ಹೆಸರನ್ನೇ ಇಡಲಾಗಿದೆಯಂತೆ. ಅಂಬರೀಶ್‌ ಅವರ ಮೊದಲ ಹೆಸರು ʻಅಮರ್‌ನಾಥ್‌ʼ. ಆ ಕಾರಣದಿಂದ ʻರಾಣಾ ಅಮರ್‌ ಅಂಬರೀಶ್' ಎಂಬುದಾಗಿ ಅಭಿಷೇಕ್ ಹಾಗೂ ಅವಿವಾ ಮಗನಿಗೆ ನಾಮಕರಣ ಮಾಡಲಾಗಿದೆ. ಸಾಕಷ್ಟು ಕಡೆಗಳಲ್ಲಿ ತಾತನ ಹೆಸರನ್ನು ಮೊಮ್ಮಗನಿಗೆ ಇಡುವ ಸಂಪ್ರದಾಯವಿದೆ. ಇಲ್ಲೂ ಅದೇ ರೀತಿ ಮಾಡಲಾ...