ಭಾರತ, ಜೂನ್ 5 -- ಅಂತೂ ನಾನು ಐಪಿಎಲ್‌ ಬಗ್ಗೆ ಈ ದುರಂತದ ಕ್ಷಣವೇ ಬರೆಯಬೇಕಾಯ್ತು! ಅಭಿಮಾನಿಗಳ ಅನಾಗರಿಕ, ಸಂಯಮ ಮೀರಿದ ವರ್ತನೆ ಏನೂ ಹೊಸದಲ್ಲ. ರಾಜ್ಯ ಸರ್ಕಾರವು ಈ ಖಾಸಗಿ ಪ್ರಶಸ್ತಿ ದಕ್ಕಿದ ತಂಡವನ್ನು ಸನ್ಮಾನ ಮಾಡಲು ಮುಂದಾಗಿದ್ದೇ ದೊಡ್ಡ ತಪ್ಪು. ಸುವ್ಯವಸ್ಥೆಯ ಹೊಣೆ ಸರ್ಕಾರದ್ದೇ. ಗೃಹ ಸಚಿವರ ರಾಜೀನಾಮೆ ಕೇಳಿದರೆ ತಪ್ಪಿಲ್ಲ.

ಇಲ್ಲಿ ಹಣ ತೆತ್ತವರೇ ಜೀವ ತೆತ್ತಿದ್ದಾರೆ ಎಂಬುದನ್ನು ನೆನಪಿಡಿ. ಇಷ್ಟು ಜನ ಸತ್ತರೂ ಸಂಭ್ರಮಾಚರಣೆ ನಿಲ್ಲಲಿಲ್ಲವಂತೆ! ನನಗಂತೂ ಇದೇನು ಅನಿರೀಕ್ಷಿತವಲ್ಲ. ಖಾಸಗಿ ಮಾರುಕಟ್ಟೆ , ಬಂಡವಾಳಶಾಹಿ ಜಾಲ, ಕೊಳ್ಳುಬಾಕತನ ಹೆಚ್ಚಿಸುವ ಜಾಹೀರಾತು ಜಾಲದ, ಕಣ್ಣು ಹಾಯಿಸಿದರೆ (ಬಡವರು ದುಡಿದ ಹಣವನ್ನು ಪ್ರತಿದಿನವೂ ದೋಚುವ) ರಮ್ಮಿ, ಪೋಕರ್ ಇತ್ಯಾದಿ ಜೂಜಾಟದ ಸಂಸ್ಥೆಗಳ ಪ್ರಾಯೋಜಕತ್ವ,ದ ಅಂಗಿಗಳೇ ಕಾಣುವ, ಈ ಕ್ರೀಡಾವಳಿಯೇ ನಮ್ಮ ಮುಂದಿನ ದಿನಗಳ ಸೂಚನೆ.

ನಾನಂತೂ ನನ್ನ ಜೀವಮಾನದಲ್ಲಿ ಕಿಂಗ್‌ಫಿಶರ್ ನೀರಿನ ಬಾಟಲಿಯನ್ನು ಕಂಡಿಲ್ಲ. ಆದ್ರೆ ಇಲ್ಲಿ ಕಾಣೋದೇ ಕಿಂಗ್‌ಫಿಶರ್ ಎಂಬ ಲಿಕ್ಕರ ಕಂಪೆನಿಯ ಸರ್‍...