ಭಾರತ, ಫೆಬ್ರವರಿ 27 -- Gold in Dates: ಖರ್ಜೂರದ ಹಣ್ಣುಗಳ ಒಳಗೆ ಚಿನ್ನದ ಬೀಜ! ಆಶ್ಚರ್ಯವಾಗ್ತಿದೆ ಅಲ್ವ. ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ವ್ಯಕ್ತಿಯೊಬ್ಬರ ಬ್ಯಾಗ್‌ನಲ್ಲಿದ್ದ ಖರ್ಜೂರದ ಹಣ್ಣುಗಳು ಕಸ್ಟಮ್ಸ್ ಅಧಿಕಾರಿಗಳ ಗಮನ ಸೆಳೆದಿದೆ. ಅವರು ಖರ್ಜೂರದ ಹಣ್ಣು ಟ್ರೇಗೆ ಸುರಿದು ಒಂದೊಂದಾಗಿ ಓಪನ್ ಮಾಡ್ತಾ ಹೋದರು. ಚಿನ್ನದ ಬೀಜ! ಒಂದೆರಡು ಗ್ರಾಂ ಅಲ್ಲ 172 ಗ್ರಾಂ ಚಿನ್ನ ಖರ್ಜೂರದ ಹಣ್ಣುಗಳ ಒಳಗಿತ್ತು.

ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಕ್ಕೆ ಫೆ 26 ರಂದು ಜೆಡ್ಡಾದಿಂದ ಬಂದಿಳಿದ ವಿಮಾನದಲ್ಲಿದ್ದ ಪ್ರಯಾಣಿಕರು ಗ್ರೀನ್ ಚಾನೆಲ್ ಎಕ್ಸಿಟ್ ಮೂಲಕ ಹೊರ ಬರುತ್ತಿದ್ದಾಗ. ಅವರನ್ನು ಕಸ್ಟಮ್ಸ್ ಅಧಿಕಾರಿಗಳು ತಡೆದರು. ಅವರನ್ನು ಪರಿಶೋಧಿಸಿ, ಅವರ ಬಳಿ ಇದ್ದ ಖರ್ಜೂರದ ಹಣ್ಣಿನ ಪೊಟ್ಟಣವನ್ನು ಪರಿಶೀಲನೆಗೆ ಕೊಂಡೊಯ್ದರು. ಅದನ್ನು ನೀಲಿ ಬಣ್ಣದ ಟ್ರೇಗೆ ಸುರಿದರು. ಒಂದೊಂದೇ ಖರ್ಜೂರದ ಹಣ್ಣು ಬಿಡಿಸಿದಾಗ ಅದೊರಳಗೆ ಹಳದಿ ಲೋಹ ಪತ್ತೆಯಾಗಿದೆ. ಬೀಜದ ಗಾತ್ರ ಇತ್...