Bengaluru, ಮಾರ್ಚ್ 7 -- Duniya Vijay: ಸ್ಯಾಂಡಲ್‌ವುಡ್‌ ನಟ, ನಿರ್ದೇಶಕ ದುನಿಯಾ ವಿಜಯ್‌ ಕನ್ನಡ ಚಿತ್ರರಂಗದಲ್ಲಿ ಬರೀ ನಟನಾಗಿ ಮಾತ್ರವಲ್ಲದೆ ನಿರ್ದೇಶಕನಾಗಿಯೂ ಯಶಸ್ವಿಯಾಗಿದ್ದಾರೆ. ಸಲಗ, ಭೀಮ ಎಂಬ ಎರಡು ಹಿಟ್‌ ಸಿನಿಮಾಗಳಲ್ಲಿ ನಟಿಸಿ, ನಿರ್ದೇಶಕನಾಗಿಯೂ ಗೆಲುವು ಕಂಡಿದ್ದಾರೆ. ಹೀಗಿರುವಾಗಲೇ ಕನ್ನಡ ಅಷ್ಟೇ ಅಲ್ಲದೆ, ಪರಭಾಷೆಗಳಲ್ಲಿಯೂ ಬೇಡಿಕೆಯನ್ನು ಹೆಚ್ಚಿಸಿಕೊಂಡಿದ್ದಾರೆ. ಈ ಹಿಂದೆ ಟಾಲಿವುಡ್‌ನಲ್ಲಿ ನಂದಮೂರಿ ಬಾಲಕೃಷ್ಣ ಎದುರು ವೀರ ಸಿಂಹ ರೆಡ್ಡಿ ಸಿನಿಮಾದಲ್ಲಿ ಖಳನಾಗಿ ಅಬ್ಬರಿಸಿದ್ದರು. ಇದೀಗ ಇದೇ ದುನಿಯಾ ವಿಜಯ್‌, ತೆಲುಗು ಬಳಿಕ ತಮಿಳು ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಅಲ್ಲಿಯೂ ವಿಲನ್‌ ಆಗಿಯೇ ಗುಟುರು ಹಾಕಲಿದ್ದಾರೆ.

ಟಾಲಿವುಡ್ ಅಂಗಳದಲ್ಲಿ ಬಾಲಯ್ಯನ ಎದುರು ವಿಲನ್ ಆಗಿ ಅಬ್ಬರಿಸಿ ಸೈಮಾ ಮುಡಿಗೇರಿಸಿಕೊಂಡಿದ್ದ ವಿಜಯ್ ಕುಮಾರ್‌ಗೆ ಮತ್ತೊಂದು ದೊಡ್ಡ ಅವಕಾಶ ಬಂದಿದೆ. ಸೌತ್‌ ಸೂಪರ್‌ಸ್ಟಾರ್‌ ನಯನತಾರಾ ಅಭಿನಯದ ಮೂಕುತಿ ಅಮ್ಮನ್ 2 ಚಿತ್ರದಲ್ಲಿ ಸಲಗ ವಿಜಯ್ ಕುಮಾರ್ ವಿಲನ್‌ ಆಗಿ ನಟಿಸಲಿದ್ದಾರೆ....