Bengaluru, ಮೇ 23 -- ಅರ್ಥ: ಇನ್ನು ಕೆಲವರಿದ್ದಾರೆ; ಅವರಿಗೆ ಹೆಚ್ಚು ಆಧ್ಯಾತ್ಮಿಕ ಜ್ಞಾನವಿರುವುದಿಲ್ಲ. ಆದರೂ ಪರಮ ಪುರುಷನ ವಿಷಯವನ್ನು ಇತರರಿಂದ ಕೇಳಿ ಅವನನ್ನು ಪೂಜಿಸಲು ಪ್ರಾರಂಭಿಸುತ್ತಾರೆ. ಆಚಾರ್ಯರಿಂದ ಕೇಳಿ ತಿಳಿದುಕೊಳ್ಳುವ ಪ್ರವೃತ್ತಿಯಿಂದ ಅವರು ಹುಟ್ಟು ಸಾವುಗಳನ್ನು ದಾಟುತ್ತಾರೆ.

ಭಾವಾರ್ಥ: ಈ ಶ್ಲೋಕವು ಆಧುನಿಕ ಸಮಾಜಕ್ಕೆ ವಿಶೇಷವಾಗಿ ಅನ್ವಯವಾಗುತ್ತದೆ. ಏಕೆಂದರೆ ಆಧುನಿಕ ಸಮಾಜದಲ್ಲಿ ಆಧ್ಯಾತ್ಮಿಕ ವಿಷಯಗಳಲ್ಲಿ ಶಿಕ್ಷಣವೇ ಇಲ್ಲ ಎನ್ನಬಹುದು. ಕೆಲವರು ನಾಸ್ತಿಕರಾಗಿ ಅಥವಾ ಅಜೇಯತಾವಾದಿಗಳಾಗಿ ಅಥವಾ ತತ್ವಜ್ಞಾನಿಗಳಾಗಿ ಕಾಣಬಹುದು; ಆದರೆ ವಾಸ್ತವವಾಗಿ ಅವರಿಗೆ ತತ್ವಜ್ಞಾನದ ತಿಳುವಳಿಕೆಯೇ ಇಲ್ಲ. ಸಾಮಾನ್ಯ ಮನುಷ್ಯನ ವಿಷಯ ಹೇಳುವುದಾದರೆ ಅವನು ಒಳ್ಳೆಯ ಮನುಷ್ಯನಾದರೆ ಕೇಳಿ ತಿಳಿದುಕೊಂಡು ಮುನ್ನಡೆಯುವ ಸಾಧ್ಯತೆಯುಂಟು. ಈ ಶ್ರವಣ ವಿಧಾನವು ಬಹು ಮುಖ್ಯವಾದದ್ದು. ಆಧುನಿಕ ಜಗತ್ತಿನಲ್ಲಿ ಕೃಷ್ಣಪ್ರಜ್ಞೆಯನ್ನು ಉಪದೇಶಿಸಿದ ಚೈತನ್ಯ ಮಹಾಪ್ರಭುಗಳು ಶ್ರವಣಕ್ಕೆ ಬಹಳ ಒತ್ತುಕೊಟ್ಟರು. ಇದಕ್ಕೆ ಕಾರಣ ಸಾಮಾನ್ಯ ಮನ...