ಭಾರತ, ಮೇ 12 -- ಆಪರೇಷನ್‌ ಸಿಂದೂರದ ಬಳಿಕ ಪಾಕಿಸ್ತಾನವು ಭಾರತದ ಮೇಲೆ ಪ್ರತಿದಾಳಿಗೆ ಮುಂದಾಗಿತ್ತು, ಈ ಸಂದರ್ಭ ಪಾಕಿಸ್ತಾನದ ಡ್ರೋನ್‌ಗಳನ್ನು ಹೊಡೆದುರುಳಿಸಿ, ದೇಶ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದು ಭಾರತದ ನಿರ್ಮಾಣದ ಆಕಾಶ್‌ ಮಿಸೈಲ್‌ ಸಿಸ್ಟಂ. ಈ ಆಕಾಶ್‌ ವ್ಯವಸ್ಥೆಯ ಹಿಂದಿನ ರೂವಾರಿ ಕರ್ನಾಟಕದ ಮೂಲದ ವಿಜ್ಞಾನಿ ಡಾ. ರಾಮ್‌ರಾವ್‌. ಭಾರತದ ರಕ್ಷಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಡಾ ರಾವರಾವ್‌ ಯಾರು, ಅವರ ಹಿನ್ನೆಲೆ ಏನು ಎನ್ನುವ ವಿವರ ಇಲ್ಲಿದೆ.

ಡಿಆರ್‌ಡಿಓದಲ್ಲಿ ವಿಜ್ಞಾನಿಯಾಗಿರುವ ರಾಮರಾವ್‌ ಆಕಾಶ್‌ ಮಿಸೈಲ್‌ ಅಭಿವೃದ್ಧಿ ಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಈ ಆಕಾಶ್‌ ಕ್ಷಿಪಣಿ ವ್ಯವಸ್ಥೆಯು ವೈಮಾನಿಕ ದಾಳಿಯನ್ನು ಎದುರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇತ್ತೀಚಿಗೆ ನಡೆದ ಭಾರತ-ಪಾಕ್‌ ದಾಳಿಯ ಆಕಾಶ ಮಿಸೈಲ್‌ ಸಿಸ್ಟಂ ಎಲ್ಲಾ ಕ್ಷಿಪಣಿ ಹಾಗೂ ಡ್ರೋನ್‌ಗಳನ್ನು ಹೊಡೆದುರುಳಿಸಲು ನೆರವಾಯಿತು. ಅಲ್ಲದೇ ಇದರ ಕಾರ್ಯಕ್ಷಮತೆ ಮೆಚ್ಚುಗೆಗೂ ಪಾತ್ರವಾಯಿತು.

ಭಾರತದಲ್ಲಿಯೇ ತಯಾರಾದ ಈ ಕ...