ಭಾರತ, ಮೇ 25 -- ಸನ್ರೈಸರ್ಸ್ ಹೈದರಾಬಾದ್ ತಂಡವು ಮತ್ತಷ್ಟು ದಾಖಲೆಗಳೊಂದಿಗೆ ಐಪಿಎಲ್ 2025ರ ಆವೃತ್ತಿಯಲ್ಲಿ ತನ್ನ ಅಭಿಯಾನ ಅಂತ್ಯಗೊಳಿಸಿದೆ. ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಪ್ರಚಂಡ ಬ್ಯಾಟಿಂಗ್ ನಡೆಸಿದ ತಂಡವು, ಐಪಿಎಲ್ ಇತಿಹಾಸದ ಮೂರನೇ ಗರಿಷ್ಠ ರನ್ ಕಲೆ ಹಾಕಿತು. ಇದರೊಂದಿಗೆ 110 ರನ್ಗಳಿಂದ ಗೆದ್ದು ಬೀಗಿತು. ಅತ್ತ ಕೆಕೆಆರ್ ತಂಡವು ಸೋಲಿನೊಂದಿಗೆ ಅಭಿಯಾನ ಮುಗಿಸಿದೆ.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸನ್ರೈಸರ್ಸ್ ಹೈದರಾಬಾದ್ ತಂಡವು ಹೆನ್ರಿಚ್ ಕ್ಲಾಸೆನ್ ಸ್ಫೋಟಕ ಶತಕ ಹಾಗೂ ಟ್ರಾವಿಸ್ ಹೆಡ್ ಅರ್ಧಶತಕದ ನೆರವಿಂದ 278 ರನ್ ಕಲೆ ಹಾಕಿತು. ಬೃಹತ್ ಗುರಿ ಬೆನ್ನಟ್ಟಿದ ಕೆಕೆಆರ್, ಬೆಟ್ಟದಷ್ಟು ಮೊತ್ತ ಕಲೆ ಹಾಕಲಾಗದೆ ಶರಣಾಯ್ತು. ಬ್ಯಾಟಿಂಗ್ನಲ್ಲಿ ಯಾರಿಂದಲೂ ಸ್ಥಿರ ಪ್ರದರ್ಶನ ಬರದ ಕಾರಣದಿಂದ 18.4 ಓವರ್ಗಳಲ್ಲಿ 168 ರನ್ಗಳಿಸಿ ಆಲೌಟ್ ಆಯ್ತು.
ಈ ಗೆಲುವಿನೊಂದಿಗೆ ಎಸ್ಆರ್ಎಚ್ ತಂಡವು ಟೂರ್ನಿಯಲ್ಲಿ ...
Click here to read full article from source
To read the full article or to get the complete feed from this publication, please
Contact Us.