ಭಾರತ, ಏಪ್ರಿಲ್ 15 -- ಕ್ರೈ ಥ್ರಿಲ್ಲರ್ ಸಿನಿಮಾ ಎಂದಾಗ ಮಲಯಾಳಂ ಸಿನಿಮಾ ಇಂಡಸ್ಟ್ರಿಯೇ ನೆನಪಾಗುತ್ತದೆ. ಆದರೆ ತಮಿಳಿನಲ್ಲೂ ಸಾಕಷ್ಟು ಕ್ರೈ ಥ್ರಿಲ್ಲರ್ ಸಿನಿಮಾಗಳು ಬಿಡುಗಡೆಯಾಗಿವೆ. ಅವುಗಳಲ್ಲಿ ಕೆಲವು ಬ್ಲಾಕ್‌ಬಸ್ಟರ್ ಯಶಸನ್ನೂ ಗಳಿಸಿವೆ. ಕೆಲವು ಚಿತ್ರಗಳು ವಿಭಿನ್ನ ಕಥೆಯನ್ನು ಹೊಂದಿದ್ದು, ಅಂತಹ ಚಿತ್ರಗಳನ್ನು ಒಮ್ಮೆಯಾದರೂ ಮಿಸ್ ಮಾಡದೇ ನೋಡಬೇಕು. ಅಂತಹ ಕೆಲವು ಚಿತ್ರಗಳು ಒಟಿಟಿಯಲ್ಲೂ ಲಭ್ಯವಿವೆ. ನೆಟ್‌ಫ್ಲಿಕ್ಸ್ ಒಟಿಟಿಯಲ್ಲಿ ನೋಡಬೇಕಾಗಿರುವ ತಮಿಳು ಕ್ರೈಮ್ ಥ್ರಿಲ್ಲರ್ ಸಿನಿಮಾಗಳಿವೆ. ಅಂತಹ 5 ಚಿತ್ರಗಳ ಬಗ್ಗೆ ಇಲ್ಲಿದೆ ಮಾಹಿತಿ.

ವಿಸಾರಣೈ ಇದು ವೆಟ್ರಿಮಾರನ್ ನಿರ್ದೇಶನದ ತಮಿಳು ಕ್ರೈಮ್ ಥ್ರಿಲ್ಲರ್ ಚಿತ್ರ. 2015 ರಲ್ಲಿ ಬಿಡುಗಡೆಯಾದ ಈ ಚಿತ್ರವು ವಿರ್ಮಶಕರ ಮೆಚ್ಚುಗೆ ಪಡೆಯಿತು, ಮಾತ್ರವಲ್ಲ ಬಾಕ್ಸ್ ಆಫೀಸ್‌ನಲ್ಲೂ ಸಾಕಷ್ಟು ಯಶಸ್ಸು ಗಳಿಸಿತು. ಈ ಚಿತ್ರದಲ್ಲಿ ಅಟ್ಟಕತ್ತಿ ದಿನೇಶ್, ಸಮುದ್ರಕಣಿ, ಮುರುಗದಾಸ್, ಕಿಶೋರ್ ಮತ್ತು ರಾಮದಾಸ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರವು ನಾಲ್ವರು ಯುವಕರ...