ಭಾರತ, ಏಪ್ರಿಲ್ 13 -- ಒಟಿಟಿ ವೇದಿಕೆಯಲ್ಲಿ ಪ್ರಸಾರವಾಗುವ ಕೆಲವು ವೆಬ್‌ಸರಣಿಗಳ ಕಥೆ ಸಿನಿಮಾಕ್ಕಿಂತಲೂ ಭಿನ್ನವಾಗಿ, ರೋಚಕವಾಗಿರುತ್ತವೆ. ಕೆಲವೊಂದು ವೆಬ್‌ ಸರಣಿಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳು ಆಗುತ್ತವೆ. ಸಾಮಾಜಿಕ ಸಂದೇಶ ಇರುವ ಸಿನಿಮಾಗಳು ಜನರ ಮನಸನ್ನು ತಲುಪುತ್ತವೆ. ಆದರೆ ಕೆಲವೊಂದು ಚರ್ಚೆಯಾದರೂ ಎಲ್ಲರಿಗೂ ಇಷ್ಟವಾಗುವುದು ಕಷ್ಟ. ಕೆಲವೊಂದು ವೆಬ್‌ಸರಣಿಗಳು ಏನಿದು, ಇದು ಯಾವ ಜಾನರ್ ಎಂದು ಅರ್ಥ ಮಾಡಿಕೊಳ್ಳುವುದು ಕಷ್ಟವಾಗುತ್ತದೆ. ಇದೀಗ ಸದ್ಯ ಚರ್ಚೆಯಲ್ಲಿರುವ ನೆಟ್‌ಫ್ಲಿಕ್ಸ್‌ನ ಅಡಾಲಸೆನ್ಸ್ ವೆಬ್‌ಸರಣಿ ಬಗ್ಗೆ ಈ ರೀತಿಯ ಅಭಿಪ್ರಾಯ ಹುಟ್ಟುಹಾಕಿದ್ದಾರೆ ಲೇಖಕ ಮಧು ವೈಎನ್‌. ಅಡಾಲಸೆನ್ಸ್ ವೆಬ್‌ಸರಣಿ ಬಗ್ಗೆ ಅವರು ಹಾಕಿರುವ ಪೋಸ್ಟ್‌ನಲ್ಲಿರ ಯಥಾವತ್ತು ಬರಹ ಇಲ್ಲಿದೆ.

ನೆಟ್‌ಫ್ಲಿಕ್ಸ್‌ನ 'ಅಡಾಲಸೆನ್ಸ್' ಎಲ್ರೂ ನೋಡಿ ನೋಡಿ ಅಂದಿದ್ದಕ್ಕೆ ದಿನಕ್ಕೆ ಹದಿನೈದು ನಿಮಿಷ ಅನ್ನಂಗೆ ಎರಡು ವಾರ ತಗೊಂಡು ನೋಡಿದೆ. ಏನ್ ಚೆನ್ನಾಗಿದೆ ಅದ್ರಲ್ಲಿ ಅಂತ ಅರ್ಥ ಆಗ್ಲಿಲ್ಲ. ಅದೇನೋ ಸಿಂಗಲ್ ಶಾಟ್ ಅಂತ. ನೋಡ್ವ...