ಭಾರತ, ಮಾರ್ಚ್ 4 -- ಕನ್ನಡದ ಆಕ್ಷನ್ ಚಿತ್ರ 'ಕೈವಾ' ಸನ್ ನೆಕ್ಸ್ಟ್ ಒಟಿಟಿ ವೇದಿಕೆಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಧನ್ವೀರ್‌ ಮತ್ತು ಮೇಘಾ ಶೆಟ್ಟಿ ನಟಿಸಿರುವ ಈ ಚಿತ್ರ 2023ರಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಎರಡು ವರ್ಷಗಳ ನಂತರ ಅದು ಒಟಿಟಿಗೆ ಬಂದಿದೆ.

ಕನ್ನಡದ ರೊಮ್ಯಾಂಟಿಕ್‌ ಸಿನಿಮಾ 'ಕಾಸಿನ ಸರ' ಸಿನಿ ಬಜಾರ್ ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಹಳ್ಳಿಗಾಡಿನ ಪ್ರೇಮಕಥೆ ಹೊಂದಿರುವ ಈ ಚಿತ್ರದಲ್ಲಿ ವಿಜಯ್ ರಾಘವೇಂದ್ರ ಮತ್ತು ಹರ್ಷಿಕಾ ಪೂಣಚ್ಚ ಜೋಡಿಯಾಗಿ ನಟಿಸಿದ್ದಾರೆ. ಈ ಸಿನಿಮಾವು 2023ರಲ್ಲಿ ಬಿಡುಗಡೆಯಾಗಿತ್ತು.

ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ ನೋಡಬೇಕು ಎಂದುಕೊಂಡಿದ್ದರೆ ಕ್ಲಾಂತ್ ಸಿನಿಮಾ ಬೆಸ್ಟ್‌. ಇದು ಸಿನಿ ಬಜಾರ್ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಅರಣ್ಯ ಪ್ರದೇಶಕ್ಕೆ ಚಾರಣಕ್ಕೆ ಹೋದ ದಂಪತಿಗಳು ಎದುರಿಸುವ ಅನಿರೀಕ್ಷಿತ ಘಟನೆಗಳ ಕುರಿತ ಕಥೆಯನ್ನು ಈ ಚಿತ್ರ ಹೊಂದಿದೆ. ವಿಘ್ನೇಶ್, ಯುವ ಮತ್ತು ಸಂಗೀತಾ ಭಟ್ ಈ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ವೈಭವ್ ಪ್ರಶಾಂತ್ ಈ ಚಿತ್ರ...