ಭಾರತ, ಏಪ್ರಿಲ್ 13 -- ಬೆಂಗಳೂರು: ಕರ್ನಾಟಕದಲ್ಲಿ ಒಟ್ಟು 2 ಕ್ರೀಡಾ ವಸತಿ ಶಾಲೆ ಹಾಗೂ 32 ಕ್ರೀಡಾ ವಸತಿ ನಿಲಯ ಹೊಂದಿರುವ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು 5ನೇ ತರಗತಿ, 8ನೇ ತರಗತಿ ಮತ್ತು ಪ್ರಥಮ ಪಿಯುಸಿ ಹಂತದ ಕ್ರೀಡಾಪಟುಗಳಿಗೆ ಪ್ರವೇಶ ಆರಂಭಿಸಿದೆ. ಕ್ರೀಡಾಪಟುಗಳಿಗೆ ಉಚಿತ ಊಟೋಪಹಾರ, ವಸತಿ, ವೈಜ್ಞಾನಿಕ ಕ್ರೀಡಾ ತರಬೇತಿ, ಕ್ರೀಡಾ ಸಲಕರಣೆಗಳು, ಕ್ರೀಡಾ ಸಮವಸ್ತ್ರ ಕ್ರೀಡಾಕೂಟಗಳಲ್ಲಿ ಭಾಗವಹಿಸಲು ದಿನಭತ್ಯೆ, ಪ್ರಯಾಣ ಭತ್ಯೆ ಸೇರಿದಂತೆ ವಿವಿಧ ಸೌಲಭ್ಯಗಳನ್ನೂ ಒದಗಿಸಲಿದೆ.

ಈ ಕ್ರೀಡಾ ವಸತಿ ಶಾಲೆ ಮತ್ತು ನಿಲಯಗಳಿಗೆ ಕ್ರೀಡಾಪಟುಗಳ ಆಯ್ಕೆಗಾಗಿ ಪ್ರತಿ ವರ್ಷದಂತೆ ಈ ವರ್ಷವೂ ಆಯ್ಕೆ ಶಿಬಿರ ಆಯೋಜನೆ ಮಾಡಲಾಗಿದೆ. ಗ್ರಾಮೀಣ ಭಾಗದ ಬಾಲಕ ಮತ್ತು ಬಾಲಕಿಯರಿಗೆ ಮತ್ತೊಂದು ವಿಶೇಷ ಅವಕಾಶವನ್ನು ನೀಡುವ ದೃಷ್ಟಿಯಿಂದ 2025-26ನೇ ಸಾಲಿನಲ್ಲಿ ವಿಶೇಷ ಆಯ್ಕೆ ಶಿಬಿರವನ್ನು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಆಯೋಜಿಸಲು ಉದ್ದೇಶಿಸಲಾಗಿದೆ. ಇಲ್ಲಿ ತರಬೇತಿ ಪಡೆದ ಅನೇಕ ಕ್ರೀಡಾಪಟುಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧ...