ಭಾರತ, ಏಪ್ರಿಲ್ 10 -- ಗುಜರಾತ್ ಟೈಟಾನ್ಸ್ ಆರಂಭಿಕ ಆಟಗಾರ ಸಾಯಿ ಸುದರ್ಶನ್ 2025ರ ಐಪಿಎಲ್​ನಲ್ಲಿ ಅದ್ಭುತ ಲಯ ಮುಂದುವರೆಸಿದ್ದಾರೆ. ಪ್ರಸಕ್ತ ಟೂರ್ನಿಯಲ್ಲಿ ಮತ್ತೊಂದು ಶ್ರೇಷ್ಠ ಇನ್ನಿಂಗ್ಸ್ ಆಡಿದ್ದಾರೆ. ಏಪ್ರಿಲ್ 9ರ ಬುಧವಾರ ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಸುದರ್ಶನ್ 53 ಎಸೆತಗಳಲ್ಲಿ 82 ರನ್ ಗಳಿಸಿದರು. ಅಹ್ಮದಾಬಾದ್​​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಜರುಗಿದ ಈ ಪಂದ್ಯದಲ್ಲಿ ಅವರ ಇನ್ನಿಂಗ್ಸ್​​ನಲ್ಲಿ 8 ಬೌಂಡರಿ, 3 ಸಿಕ್ಸರ್​ಗಳಿದ್ದವು.​ ಇದು ಸುದರ್ಶನ್ ಅವರ ಐಪಿಎಲ್ ವೃತ್ತಿಜೀವನದ 30ನೇ ಪಂದ್ಯ. ಚೆನ್ನೈ ಕ್ರಿಕೆಟಿಗ 'ಸೂಪರ್ 30' ಕ್ಲಬ್​ಗೆ ಪ್ರವೇಶಿಸುವ ಮೂಲಕ ಕ್ರಿಸ್ ಗೇಲ್ ದಾಖಲೆ ಮುರಿದಿದ್ದಾರೆ.

ಐಪಿಎಲ್​ನ 30 ಇನ್ನಿಂಗ್ಸ್​​ಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಸುದರ್ಶನ್ 2ನೇ ಸ್ಥಾನದಲ್ಲಿದ್ದಾರೆ. ಸದ್ಯ ಅವರ ಖಾತೆಯಲ್ಲಿ 1307 ರನ್ ಇದೆ. 30 ಐಪಿಎಲ್ ಇನ್ನಿಂಗ್ಸ್​​ಗಳಲ್ಲಿ 1141 ರನ್ ಗಳಿಸಿದ್ದ ಗೇಲ್ ಅವರನ್ನು ಮೂರನೇ ಸ್ಥಾನಕ್ಕೆ ತಳ್ಳಿದ್ದಾರೆ. ಇಷ್ಟು ...