नई दिल्ली, ಏಪ್ರಿಲ್ 20 -- ಲೆಜೆಂಡರಿ ಕ್ರಿಕೆಟಿಗ ಅಥವಾ ಕ್ರಿಕೆಟ್​​ಗೆ ಸಂಬಂಧಿಸಿದ ಶ್ರೇಷ್ಠ ವ್ಯಕ್ತಿಯ ಹೆಸರಿನಲ್ಲಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಸ್ಟ್ಯಾಂಡ್ ನಿರ್ಮಿಸುವುದನ್ನು ನೀವು ಇಲ್ಲಿಯವರೆಗೆ ಕೇಳಿರಬಹುದು, ಆದರೆ ಭಾರತದ ಲೆಜೆಂಡರಿ ನಾಯಕನ ಹೆಸರಿನ ಸ್ಟ್ಯಾಂಡ್ ಅನ್ನು ಕ್ರೀಡಾಂಗಣದಿಂದ ತೆಗೆದುಹಾಕಿರುವುದನ್ನು ನೀವು ಎಂದಾದರೂ ಕೇಳಿದ್ದೀರಾ? ನಿಸ್ಸಂಶಯವಾಗಿ, ನೀವು ಕೇಳಿರಲಿಕ್ಕಿಲ್ಲ, ಆದರೆ ಈಗ ಅದು ಸಂಭವಿಸಲಿದೆ.

ಭಾರತ ತಂಡದ ಪರ 104 ಅಂತಾರಾಷ್ಟ್ರೀಯ ಪಂದ್ಯಗಳನ್ನು ಗೆದ್ದಿರುವ ದಿಗ್ಗಜ ನಾಯಕ ಮೊಹಮ್ಮದ್ ಅಜರುದ್ದೀನ್ ಅವರ ಹೆಸರಿನ ಸ್ಟ್ಯಾಂಡ್ ಅನ್ನು ಹೈದರಾಬಾದ್​ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಕೆಟ್ ಮೈದಾನದಿಂದ ತೆಗೆದುಹಾಕಲಾಗುವುದು. ಈ ಬಗ್ಗೆ ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ (HCA) ತನ್ನ ಆದೇಶ ಸ್ವೀಕರಿಸಿದೆ. ಭವಿಷ್ಯದಲ್ಲಿ ಅಜರುದ್ದೀನ್ ಹೆಸರಿನಲ್ಲಿ ಯಾವುದೇ ಟಿಕೆಟ್​ಗಳನ್ನು ಮುದ್ರಿಸದಂತೆ ನೋಡಿಕೊಳ್ಳಲು ಹೆಚ್​​ಸಿಎಗೆ ಸೂಚಿಸಲಾಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಬೃಹತ್ ಮೈಲಿಗಲ್...