ಭಾರತ, ಜೂನ್ 29 -- ಹೇಳಿ, ನಮಗೆ ಯಾವ ರೀತಿಯ ಜನರು ಇಷ್ಟ? ಸದಾ ತಮ್ಮ ಸಾಧನೆಗಳ ಬಗ್ಗೆ ಹೆಮ್ಮೆಯಿಂದ ಹೇಳಾಡುವವರೇ? ಅಥವಾ ಮೌನವಾಗಿ ಕೆಲಸ ಮಾಡಿ, ಯಶಸ್ಸು ಸಿಕ್ಕಾಗ ಅದನ್ನು ಇತರರೊಂದಿಗೆ ಹಂಚಿಕೊಳ್ಳುವವರೇ? ಖಂಡಿತವಾಗಿಯೂ ಎರಡನೆಯವರು ನಮ್ಮನ್ನು ಹೆಚ್ಚು ಆಕರ್ಷಿಸುತ್ತಾರೆ. ಇತ್ತೀಚೆಗೆ ಎರಡು ಘಟನೆಗಳು ನನ್ನ ಗಮನ ಸೆಳೆದವು.

ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡ ಇತ್ತೀಚೆಗೆ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್ ಗೆದ್ದಿದೆ. 27 ವರ್ಷಗಳ ಕಾಲ ಕಾಯುತ್ತಿದ್ದ ಈ ಟ್ರೋಫಿ ಅವರ ಕೈಗೆ ಬಂದಾಗ ಆನಂದ ಹೇಗಿರಬಹುದು ಎಂದು ಊಹಿಸಿಕೊಳ್ಳಿ. ಲಂಡನ್‌ನ ಪ್ರಸಿದ್ಧ ಲಾರ್ಡ್ಸ್ ಕ್ರಿಕೆಟ್ ಮೈದಾನದ ಬಾಲ್ಕನಿಯಲ್ಲಿ ಆ ಸಮಯದಲ್ಲಿ ನಿಂತಿದ್ದವರು ಟೆಂಬಾ ಬವುಮಾ ತಂಡದ ನಾಯಕ.

ಬವುಮಾ ಅವರ ನಾಯಕತ್ವದ ಬಗ್ಗೆ ಸ್ವಲ್ಪ ಹೇಳಬೇಕು. ಇತಿಹಾಸದಲ್ಲಿ ಮೊದಲ ಹತ್ತು ಟೆಸ್ಟ್ ಪಂದ್ಯಗಳಲ್ಲಿ ಒಂಬತ್ತನ್ನು ಗೆದ್ದ ಮೊದಲ ನಾಯಕ ಎಂಬ ದಾಖಲೆ ಅವರ ಹೆಸರಿನಲ್ಲಿದೆ. ಈ ಸಾಧನೆಯ ಬಗ್ಗೆ ಹೆಮ್ಮೆಯಿಂದ ಮಾತಾಡಲು ಅವರಿಗೆ ಸಾಕಷ್ಟು ಕಾರಣಗಳಿದ್ದವು. ಯಾರೂ ಅವರನ್ನು ದೂಷಿಸುತ...