ಭಾರತ, ಮಾರ್ಚ್ 27 -- Amruthadhaare serial Yesterday Episode: ಕ್ಯಾಬ್‌ ಚಾಲಕ ಗೌತಮ್‌ ದಿವಾನ್‌ ಮನೆಯಿಂದ ಹೊರಗೆ ಬಂದಿದ್ದಾನೆ. ಆಗ ಲಚ್ಚಿಯನ್ನು ಹುಡುಕುತ್ತ ಸುಧಾ ಹೊರಗೆ ಬಂದಿದ್ದಾರೆ. "ಹಲೋ ಮೇಡಂ" ಎಂದು ಕರೆಯುತ್ತಾನೆ. "ಇವನ ಕೈಯಲ್ಲಿ ಸಿಕ್ಕಿ ಹಾಕಿಕೊಂಡರೆ ಮುಗೀತು" ಎಂದು ಸುಧಾ ಎಸ್ಕೆಪ್‌ ಆಗಲು ನೋಡುತ್ತಾರೆ. "ನಿಮ್ಮನ್ನು ನೋಡಿದಾಗ ಈ ಫೇಸ್‌ಕಟ್‌ ಅನ್ನು ಎಲ್ಲೋ ನೋಡಿದ್ದೇನೆ ಎಂದು ಅನಿಸುತ್ತದೆ. ಆದರೆ, ಸರಿಯಾಗಿ ಸಿಗ್ನಲ್‌‌ ಕನೆಕ್ಟ್‌ ಆಗ್ತಾ ಇಲ್ಲ" ಎನ್ನುತ್ತಾನೆ. "ನಿಮ್ಮ ಕೆಲಸ ಏನಿದೆ ನೋಡಿ" ಎಂದು ಸುಧಾ ಕೋಪದಿಂದ ಹೇಳುತ್ತಾರೆ. "ಹೆಸರು ಕೇಳಿದ್ರೆ ಒಳ್ಳೆ ಕಿಡ್ನಿ ಕೇಳಿದವರ ರೀತಿ ಆಡ್ತಿದ್ದೀರಿ ಅಲ್ವಾ ಮೇಡಂ" ಎನ್ನುತ್ತಾನೆ. ಆದರೂ ಸುಧಾಳ ಕೋಪ ಕಡಿಮೆಯಾಗುವುದಿಲ್ಲ. ಒಮ್ಮೆ ಬಿಪಿ ಚೆಕ್‌ ಮಾಡಿಕೊಳ್ಳಿ ಎನ್ನುತ್ತಾನೆ. ಆಗ ಲಚ್ಚಿ ಬರುತ್ತಾಳೆ. ಖುಷಿಯಿಂದ ಕ್ಯಾಬ್‌ ಚಾಲಕನ ಬಳಿ ಮಾತನಾಡುತ್ತಾಳೆ. ಬಳಿಕ ಲಚ್ಚಿ ಜತೆ ಸುಧಾ ಹೋಗುತ್ತಾಳೆ. ಆದರೆ, ಈ ಚಾಲಕನಿಗೆ ಎಲ್ಲೋ ಕನೆಕ್ಟ್‌ ಆಗುತ್ತದೆ. ಹಳೆಯ ಕೌಟುಂಬಿ...