ಭಾರತ, ಏಪ್ರಿಲ್ 11 -- ಕನ್ನಡ ಚಿತ್ರರಂಗಕ್ಕೆ ಹೇಮಂತ್‌ ರಾವ್‌ ಹಲವು ಕೊಡುಗೆಗಳನ್ನು ನೀಡಿದ್ದಾರೆ. ಸಿನಿಮಾ ನಿರ್ದೇಶನ, ನಿರ್ಮಾಣ, ಬರವಣಿಗೆ ಸೇರಿದಂತೆ ಹಲವು ರೀತಿಯಲ್ಲಿ ಕೊಡುಗೆ ನೀಡಿದ್ದಾರೆ. ಇವರು 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಮೂಲಕ ಕನ್ನಡ ಸಿನಿಮಾಪ್ರಿಯರ ಗಮನ ಸೆಳೆದಿದ್ದರು. ಇವರ ನಿರ್ದೇಶನದ 'ಸಪ್ತ ಸಾಗರದಾಚೆ ಎಲ್ಲೋ - ಸೈಡ್ ಎ' ಮತ್ತು 'ಸೈಡ್ ಬಿ' ಕರ್ನಾಟಕದ ಗಡಿ ದಾಟಿ ಜನಪ್ರಿಯತೆ ಪಡೆಯಿತು. ಇದೀಗ ಇವರು ಅಜ್ಞಾತವಾಸಿ ಎಂಬ ಕನ್ನಡ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಏಪ್ರಿಲ್‌ 11ರಂದು ಬಿಡುಗಡೆಯಾದ ಅಜ್ಞಾತವಾಸಿ ಸಿನಿಮಾದ ಕುರಿತು ಹಿಂದೂಸ್ತಾನ್‌ ಟೈಮ್ಸ್‌ ಜತೆಗೆ ಹೇಮಂತ್‌ ರಾವ್‌ ಮಾತನಾಡಿದ್ದಾರೆ. ಈ ಸಿನಿಮಾದಲ್ಲಿ ರಂಗಾಯಣ ರಘು, ಶರತ್ ಲೋಹಿತಾಶ್ವ ಮತ್ತು ಸಿದ್ದು ಮೂಲಿಮನಿ ಮುಂತಾದವರು ನಟಿಸಿದ್ದಾರೆ.

"ನನ್ನಮ್ಮ 2024ರಲ್ಲಿ ಕ್ಯಾನ್ಸರ್‌ ಕಾಯಿಲೆಯಿಂದ ನಿಧನರಾದರು. ಅವರ ನನೆಪಿನಲ್ಲಿ ದಾಕ್ಷಾಯಿಣಿ ಟಾಕೀಸ್‌ ಆರಂಭಿಸಿದೆ. ನನಗೆ ಅಮ್ಮ ಪುಸ್ತಕಗಳನ್ನು ಓದಲು ಕಲಿಸಿದರು. ನನಗೆ, ಉತ್ತಮ ಕಥೆ ಹೇಳುವಿಕೆ...