ಭಾರತ, ಮಾರ್ಚ್ 9 -- ನಾವು ನಮ್ಮ ತೋಳಿನಲ್ಲಿ ಧರಿಸುವ, ಚೀಲ ಅಥವಾ ಜೇಬಿನಲ್ಲಿ ಇರಿಸುವ ಯಂತ್ರಗಳು ನಮ್ಮನ್ನು ಆಪತ್ಕಾಲದಲ್ಲಿ ರಕ್ಷಿಸುತ್ತದೆ. ಮನೆಯಲ್ಲಿ ದೇವರ ಕೋಣೆಯಲ್ಲಿ ಇರಿಸಿದ ಯಂತ್ರಗಳು ಆ ಮನೆಯ ವಾಸ್ತುದೋಷವನ್ನು ನಿವಾರಿಸಿ, ಮನೆಯ ಎಲ್ಲಾ ಸದಸ್ಯರಿಗೂ ಉತ್ತಮ ಫಲಗಳನ್ನು ನೀಡುತ್ತವೆ. ಆದರೆ ಮನೆಗಳಲ್ಲಿ ಇರಿಸುವ ಯಂತ್ರಗಳನ್ನು ಮಲಗಿಸಿ ಇಡಬಾರದು. ಅದನ್ನು ಪೂಜಿಸುವ ವೇಳೆಯಲ್ಲಿಯೂ ನಿಲ್ಲಿಸಿ ಪೂಜೆ ಸಲ್ಲಿಸಬೇಕು. ಯಾವುದೇ ಯಂತ್ರವಿರಲಿ ಆ ಯಂತ್ರಕ್ಕೆ ಒಡೆಯನಾದ ಗ್ರಹ ಮತ್ತು ಆ ಗ್ರಹಕ್ಕೆ ಸಂಬಂಧಿಸಿದ ದೇವತೆಗಳನ್ನು ಪೂಜಿಸುವುದು ಬಲುಮುಖ್ಯ. ಗ್ರಹಣಗಳು, ಪ್ರತಿ ತಿಂಗಳ ಸಂಕ್ರಮಣಗಳು, ಅಮಾವಾಸ್ಯೆ, ಹುಣ್ಣಿಮೆ, ಉತ್ತರಾಯಣ ಪುಣ್ಯಕಾಲ ಮತ್ತು ದಕ್ಷಿಣಾಯಣ ಪುಣ್ಯಕಾಲಗಳಂದು ಯಂತ್ರಗಳಿಗೆ ಊದಿನ ಕಡ್ಡಿಯಿಂದ ಧೂಪವನ್ನು ಹಾಕಬೇಕು. ಆ ದಿನಗಳಂದು ಪೂರ್ವ ದಿಕ್ಕಿಗೆ ಮುಖ ಮಾಡಿ ಆಯಾ ಯಂತ್ರಗಳ ದೇವತೆಗಳಿಗೆ ಸಂಬಂಧಿಸಿದ ಮಂತ್ರಗಳು ಅಥವಾ ಶ್ಲೋಕಗಳನ್ನು ಪಠಿಸಿದಲ್ಲಿ ವಿಶೇಷ ಫಲಗಳು ದೊರೆಯುತ್ತವೆ. ಯಂತ್ರಗಳನ್ನು ಯಾವುದೇ ಕಾರಣಕ್ಕೂ ಸ...