ಭಾರತ, ಏಪ್ರಿಲ್ 9 -- ಬೆಂಗಳೂರು: ಕೌಟುಂಬಿಕ ಕಲಹದಿಂದ ಮನನೊಂದು ಸಾಫ್ಟ್ ವೇರ್ ಇಂಜಿನಿಯರ್ ಪ್ರಶಾಂತ್ ನಾಯರ್ ಅವರು ತಮ್ಮ ಅಪಾರ್ಟ್ ಮೆಂಟ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 40 ವರ್ಷದ ಇವರು ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದರು. ಆತ್ಮಹತ್ಯೆ ಮಾಡಿಕೊಂಡ ಪ್ರಶಾಂತ್ ಅವರ ತಂದೆ, ಸಿಡೇದಹಳ್ಳಿಯ ಸೌಂದರ್ಯ ನಗರದ ನಿವಾಸಿ ಎಂ.ಎನ್.ಕುಟ್ಟಿ ಅವರು ದೂರು ನೀಡಿದ್ದಾರೆ. 77 ವರ್ಷದ ಕುಟ್ಟಿ ಅವರು ಭಾರತೀಯ ಸೇನೆಯಲ್ಲಿ ಕ್ಯಾಂಟೀನ್ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಇವರ ದೂರು ಆಧರಿಸಿ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವಿನ ಪ್ರಕರಣ (ಯುಡಿಆರ್) ದಾಖಲಾಗಿದೆ. ಗಾಣಿಗರಹಳ್ಳಿಯ ಡಿಎಕ್ಸ್ ಸ್ಮಾರ್ಟ್ ನೆಸ್ಟ್ ಅಪಾರ್ಟ್ ಮೆಂಟ್ ನಲ್ಲಿ ಪ್ರಶಾಂತ್ ನಾಯರ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕೇರಳ ಮೂಲದ ಪ್ರಶಾಂತ್ ಅವರು 12 ವರ್ಷಗಳ ಹಿಂದೆ ಪೂಜಾ ನಾಯರ್ ಅವರನ್ನು ವಿವಾಹವಾಗಿದ್ದರು. ಇವರಿಗೆ 8 ವರ್ಷದ ಮಗುವಿದೆ. ಕೆಲವು ವರ್ಷಗಳಿಂದ ದಂಪತಿ ಮಧ್ಯೆ ಕೌಟುಂಬಿಕ ಕಲಹ...