ಭಾರತ, ಮಾರ್ಚ್ 20 -- 18ನೇ ಆವೃತ್ತಿಯ ಐಪಿಎಲ್ ಪಂದ್ಯಾವಳಿಯು ಮತ್ತಷ್ಟು ರೋಚಕವಾಗಿರಲಿದೆ. ಇದಕ್ಕಾಗಿ ನಿಯಮದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಈವರೆಗೂ ಐಪಿಎಲ್ ಪಂದ್ಯಗಳಲ್ಲಿ ಚೆಂಡಿನ ಮೇಲೆ ಲಾಲಾರಸವನ್ನು (ಸಲೈವಾ)ಹಚ್ಚುವುದನ್ನು ನಿಷೇಧಿಸಲಾಗಿತ್ತು. ಕೋವಿಡ್ 19 ಸಾಂಕ್ರಮಿಕ ಆವರಿಸಿದ್ದ ಸಮಯದಲ್ಲಿ ಚೆಂಡಿನ ಮೇಲೆ ಲಾಲಾರಸ ಸವರುವುದಕ್ಕೆ ನಿಷೇಧ ಹೇರಲಾಗಿತ್ತು. ಕಳೆದ ಆವೃತ್ತಿಯವರೆಗೂ ಇದ್ದ ಆ ನಿಷೇಧವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಗುರುವಾರ (ಮಾ. 20) ತೆಗೆದುಹಾಕಿದೆ.
ಚೆಂಡನ್ನು ಹೊಳೆಯಿಸಲು ಮತ್ತು ಬೌಲರ್ ಚೆಂಡಿನ ಮೇಲೆ ನಿಯಂತ್ರಣ ಪಡೆಯಲು ಲಾಲಾರಸವನ್ನು ಹಚ್ಚಲಾಗುತ್ತದೆ. ಆಟಗಾರರು ಬೌಲಿಂಗ್ ಮಾಡುವಾಗ, ಫೀಲ್ಡಿಂಗ್ ಮಾಡುತ್ತಿರುವ ತಂಡದ ಸದಸ್ಯರು ಚೆಂಡಿನ ಮೇಲೆ ಬಾಯಿಯಿಂದ ಎಂಜಲು ತೆಗೆದು ಹಚ್ಚುವುದನ್ನು ನೀವು ನೋಡಿರಬಹುದು. ಆದರೆ, ಕೋವಿಡ್ -19 ಸಮಯದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಲಾಲಾರಸ ಹಚ್ಚುವ ಹಳೆಯ ಅಭ್ಯಾಸವನ್ನು ಐಸಿಸಿ ನಿಷೇಧಿಸಿತ್ತು. ಆ ನಂತರ ಐಪಿಎಲ್‌ನಲ್ಲಿಯೂ ಇದೇ ನ...
Click here to read full article from source
To read the full article or to get the complete feed from this publication, please
Contact Us.