ಭಾರತ, ಏಪ್ರಿಲ್ 30 -- ವರನಟ, ನಟಸಾರ್ವಭೌಮ, ಕನ್ನಡ ಕಂಠೀರವ ಡಾಕ್ಟರ್‌ ರಾಜ್‌ಕುಮಾರ್‌ ಅವರಿಗೆ ಆಹಾರದ ಮೇಲೆ ಅತೀವ ಪ್ರೀತಿ. ಹಿಟ್ಟಿನ ಬೆಲೆ ಗೊತ್ತಿರುವ ಮೇರುನಟ. ನಾನು ನಟನೆಗೆ ಬಂದದ್ದು ಹೊಟ್ಟೆಪಾಡಿಗೆ ಎಂದು ಡಾ. ರಾಜ್‌ಕುಮಾರ್‌ ಹೇಳುತ್ತಿದ್ದರು. ಒಂದು ಅಗಳು ಅನ್ನವನ್ನು ವ್ಯರ್ಥಮಾಡಬಾರದೆಂದು ಡಾ. ರಾಜ್‌ಕುಮಾರ್‌ ಹೇಳುತ್ತಿದ್ದರು.ಅಣ್ಣಾವ್ರು ಊಟ ಮಾಡಿದ ತಟ್ಟೆಯಲ್ಲಿ ಒಂದು ಅಗಳು ಅನ್ನ ಉಳಿಸುತ್ತಿರಲಿಲ್ಲ. ಅನ್ನವನ್ನು ವ್ಯರ್ಥ ಮಾಡಬಾರದು ಎಂದು ಅವರು ಭಾವಿಸುತ್ತಿದ್ದರು.

ರಾಜ್‌ಕುಮಾರ್‌ ಬದುಕಿನ ನಿಜಪ್ರಸಂಗಗಳಲ್ಲಿ ಅನೇಕ ಆಸಕ್ತಿಕರ ವಿಚಾರಗಳಿವೆ. ಅವುಗಳಲ್ಲಿ ಹೆಚ್ಚು ಜನಪ್ರಿಯತೆ ಪಡೆದಿರುವುದು ಕೂಲಿಯಾಳು ಗುಡಿಸಲಿನಲ್ಲಿ ಭರ್ಜರಿ ಬಾಡೂಟ ಸವಿದ ಕಥೆ.

ಅದೊಂದು ದಿನ ಸಂಜೆ ರಾಜಕುಮಾರ್‌ ಅವರು ವಾಕಿಂಗ್‌ ಹೋಗುತ್ತಿದ್ದರು. ಪ್ರತಿನಿತ್ಯ ವಾಕಿಂಗ್‌ ಹೋಗುವ ಅಭ್ಯಾಸ ಅವರಿಗಿತ್ತು. ಅಂದು ಸದಾಶಿವನಗರದ ಮನೆಯಿಂದ ಹೊರಗೆ ವಾಕಿಂಗ್‌ಗೆ ಹೋಗುವ ಸಮಯ.

ಆ ಸಮಯದಲ್ಲಿ ರಾಜಕುಮಾರ್‌ ಜತೆ ಅವರ ಬಂಟ ಚನ್ನ ಇದ್ದ. ಈ ರೀತಿ ಬೆಂಗಳ...