ಬೆಂಗಳೂರು, ಏಪ್ರಿಲ್ 20 -- ಐಪಿಎಲ್ 2025ರ ಆವೃತ್ತಿಯಲ್ಲಿ ರಿವೇಂಜ್‌ ಪಂದ್ಯಗಳು ಆರಂಭವಾಗಿದೆ. ತಂಡಗಳು ಈ ಬಾರಿಯ ಟೂರ್ನಿಯಲ್ಲಿ ಈಗಾಗಲೇ ಎದುರಿಸಿದ ತಂಡಗಳನ್ನು ಮತ್ತೊಮ್ಮೆ ಎದುರಿಸುತ್ತಿದೆ. ಏಪ್ರಿಲ್ 21ರ ಸೋಮವಾರ ನಡೆಯಲಿರುವ ಟೂರ್ನಿಯ 39ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಮತ್ತು ಗುಜರಾತ್ ಟೈಟಾನ್ಸ್ (ಜಿಟಿ) ತಂಡಗಳು ಪ್ರಸಕ್ತ ಆವೃತ್ತಿಯಲ್ಲಿ ಇದೇ ಮೊದಲ ಬಾರಿಗೆ ಮುಖಾಮುಖಿಯಾಗಲಿವೆ. ಕೋಲ್ಕತ್ತಾದ ಐತಿಹಾಸಿಕ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಪಂದ್ಯ ನಡೆಯಲಿದ್ದು, ಪಂಜಾಬ್ ಕಿಂಗ್ಸ್ ವಿರುದ್ಧ ನಿರಾಶಾದಾಯಕ ಸೋಲು ಅನುಭವಿಸಿದ್ದ ಆತಿಥೇಯ ಕೆಕೆಆರ್ ಗೆಲುವಿನ ಹಳಿಗೆ ಮರಳುವ ವಿಶ್ವಾಸದಲ್ಲಿದೆ.

ಕೊನೆಯ ಪಂದ್ಯದಲ್ಲಿ ಪಂಜಾಬ್‌ ತಂಡ ಕೇವಲ 95 ರನ್‌ಗಳಿಗೆ ಆಲೌಟ್ ಆಗಿತ್ತು. ಕೇವಲ 112 ರನ್‌ ಚೇಸಿಂಗ್‌ ಮಾಡಲಾಗದೆ, ಐಪಿಎಲ್‌ ಇತಿಹಾಸದಲ್ಲಿ ಕೆಕೆಆರ್ ಕಳಪೆ ದಾಖಲೆ ನಿರ್ಮಿಸಿತು. ಈ ಸೋಲು ಕೆಕೆಆರ್ ತಂಡದ ದುರ್ಬಲತೆ ಮತ್ತು ಅಸ್ಥಿರ ಬ್ಯಾಟಿಂಗ್ ಲೈನಪ್‌ ಅನ್ನು ಬಹಿರಂಗಪಡಿಸಿತು. ಇದೇ ವೇಳೆ ತಂಡದ ಬೌಲಿಂಗ...