ಭಾರತ, ಏಪ್ರಿಲ್ 3 -- ಚಿಕಿತ್ಸೆಗಾಗಿ 4 ವರ್ಷ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಗೆ ಸದ್ಯ ಮಾತು ಬರುತ್ತಿಲ್ಲ. ಆರ್ಧ ಶರೀರ ಚಲನೆ ನಿಲ್ಲಿಸಿದೆ - ಅಂದರೆ ಲಕ್ಷ ಪೀಡಿತರಾಗಿದ್ದಾರೆ. ಚಿಕಿತ್ಸೆಯ ವೆಚ್ಚ ಭರಿಸಲಾಗುತ್ತಿಲ್ಲ ಎಂದು ತಿಳಿದ ಬಳಿಕ ಮಹಿಳೆಯನ್ನು ಆಸ್ಪತ್ರೆಯಲ್ಲೇ ಬಿಟ್ಟು ಹೋಗಿದ್ದ ಪತಿ. ಚಿಕಿತ್ಸಾ ವೆಚ್ಚ ಭರಿಸದೇ ಚಿಕಿತ್ಸೆ ಮುಂದುವರಿಸಲಾಗದು ಎಂದು ಹೇಳಿತು ಖಾಸಗಿ ಆಸ್ಪತ್ರೆ. ಪತಿ ತನ್ನ ಕೈಲಿ ಅಷ್ಟು ಹಣ ಇಲ್ಲ ಎಂದು ಕೈ ಚೆಲ್ಲಿದ್ದಾರೆ. ಪ್ರಕರಣ ಹೈಕೋರ್ಟ್‌ ಮೆಟ್ಟಿಲೇರಿದೆ. ಇದು ಪಶ್ಚಿಮ ಬಂಗಾಳದ ಕೋಲ್ಕತಾದಲ್ಲಿ ನಡೆದಿರುವ ಘಟನೆ. ಈ ಪ್ರಕರಣ ಸ್ವಲ್ಪ ಕುತೂಹಲಕಾರಿ. ಇಂತಹ ಸನ್ನಿವೇಶದಲ್ಲಿ ಆಸ್ಪತ್ರೆ ಆಡಳಿತ ಮಂಡಳಿ ಯಾವ ರೀತಿ ಕ್ರಮ ಜರುಗಿಸುತ್ತದೆ ಎಂಬ ವಿವರವೂ ಇದರಲ್ಲಿದೆ.

ಕೋಲ್ಕತಾದ ಅಪೊಲೋ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ 2021ರ ಸೆಪ್ಟೆಂಬರ್‌ನಲ್ಲಿ ಜೈಪ್ರಕಾಶ್ ಗುಪ್ತಾ ಎಂಬುಬವರು ತಮ್ಮ ಪತ್ನಿಯನ್ನು ಚಿಕಿತ್ಸೆಗಾಗಿ ದಾಖಲಿಸಿದರು. ಅಂದು ಆಕೆಗೆ 40 ವರ್ಷ. ತಲೆಗೆ ಗಾಯವಾಗಿದೆ ಎಂದು ಆಸ್ಪತ್ರೆಗೆ...