ಭಾರತ, ಮಾರ್ಚ್ 26 -- ಕೋಲಾರ: ಕೋಲಾರ ತಾಲೂಕಿನ ಮದ್ದೇರಿ ಗ್ರಾಮದ ಕೆನರಾ ಬ್ಯಾಂಕ್ ಶಾಖೆಯಲ್ಲಿ 2 ಕೋಟಿ ರೂ.ಗಳಿಗೂ ಹೆಚ್ಚಿನ ಮೊತ್ತದ ಅವ್ಯವಹಾರ ನಡೆದಿದೆ. ಈ ಶಾಖೆಯಲ್ಲಿ ಗ್ರಾಹಕರು ಇಟ್ಟಿದ್ದ ಅಸಲಿ ಚಿನ್ನ ನಾಪತ್ತೆಯಾಗಿ ನಕಲಿ ಚಿನ್ನವಾಗಿದೆ. ಠೇವಣಿ ಹಣ ಗ್ರಾಹಕರಿಗೆ ತಿಳಿಯದಂತೆ ಮಾಯವಾಗಿದೆ. ಈ ಅವ್ಯವಹಾರಕ್ಕೆ ಬ್ಯಾಂಕ್‌ ನ ಸಿಬ್ಬಂದಿಯೇ ಕಾರಣ ಎನ್ನುವುದು ಮೇಲ್ನೋಟಕ್ಕೆ ಸಾಬೀತಾಗಿದ್ದು, ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಲಾಗಿದೆ. ಬ್ಯಾಂಕ್ ಮ್ಯಾನೇಜರ್ ಹಾಗೂ ಸೂಪರ್ವೈಸರ್ ಅವರಿಗೆ ಕನ್ನಡ ಭಾಷೆ ಬಾರದೆ ಇರುವುದೇ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ.

ಮೂರು ದಶಕಗಳಷ್ಟು ಹಳೆಯದಾದ ಈ ಶಾಖೆಯಲ್ಲಿ ಇದೀಗ ಪ್ರತಿದಿನ ಗ್ರಾಹಕರು ಎಡತಾಕುತ್ತಿದ್ದು, ತಮ್ಮ ಬ್ಯಾಂಕ್‌ ಖಾತೆ ಹಾಗೂ ಲಾಕರ್‌ ಗಳನ್ನು ಪರಿಶೀಲಿಸುತ್ತಿದ್ದಾರೆ. ಬ್ಯಾಂಕ್ ಖಾತೆಯಲ್ಲಿಟ್ಟಿದ್ದ ಹಣವನ್ನು ಕಳೆದುಕೊಂಡ ಗ್ರಾಹಕರು ಕಂಗಾಲಾಗಿದ್ದಾರೆ. ಮದುವೆ, ಮಕ್ಕಳ ಉನ್ನತ ಶಿಕ್ಷಣ, ಮನೆ ನಿವೇಶನ ಖರೀದಿ, ಹಬ್ಬ ಹೀಗೆ ಹತ್ತಾರು ಉದ್ದೇಶಗಳಿಗೆ ಕೂಡಿಟ್ಟ ಹಣ, ಠೇವಣಿ ಇ...