Bengaluru, ಏಪ್ರಿಲ್ 15 -- Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಸೋಮವಾರ ಏಪ್ರಿಲ್ 14ರ ಸಂಚಿಕೆಯಲ್ಲಿ ಜಾಹ್ನವಿ, ನರಸಿಂಹನ ಮನೆಯಲ್ಲಿ ಆಶ್ರಯ ಪಡೆದಿದ್ದಾಳೆ. ಜಾಹ್ನವಿಗೆ ಊಟ ತಂದುಕೊಟ್ಟ ನರಸಿಂಹನ ಪತ್ನಿ, ಅವಳ ಜೊತೆ ಮಾತನಾಡುತ್ತಾ ಕುಳಿತಿದ್ದಾಳೆ. ಜತೆಗೆ, ತನ್ನ ಗಂಡನ ಜೀವ ಉಳಿಸಿ, ಮಾಂಗಲ್ಯ ಉಳಿಸಿದ್ದಕ್ಕೆ ಅವಳಿಗೆ ಧನ್ಯವಾದ ಹೇಳಿದ್ದಾಳೆ. ಜತೆಗೆ ಅವಳನ್ನು ಮಾತನಾಡಿಸಿ, ಅವಳ ಬಗ್ಗೆ ತಿಳಿದುಕೊಳ್ಳುವ ಯತ್ನ ಮಾಡಿದ್ದಾಳೆ. ಆದರೆ ಜಾಹ್ನವಿ ಮಾತ್ರ, ನನಗಾರೂ ಇಲ್ಲ, ನಾನು ಈಗ ಒಂಟಿ, ನನ್ನ ಪಾಲಕರು ಎರಡು ವರ್ಷದ ಹಿಂದೆ ತೀರಿಕೊಂಡಿದ್ದಾರೆ ಎನ್ನುತ್ತಾಳೆ. ಗಂಡನ ಬಗ್ಗೆ ಕೇಳಿದಾಗ, ಅವರನ್ನು ಬಿಟ್ಟು ಬಂದಿದ್ದೇನೆ, ಅವರ ಬಗ್ಗೆ ಮಾತನಾಡಲು ನನಗೆ ಇಷ್ಟವಿಲ್ಲ ಎಂದು ಹೇಳಿದ್ದಾಳೆ. ಹೀಗಾಗಿ ಮತ್ತೆ ಅವಳಲ್ಲಿ ಹೆಚ್ಚಿನ ವಿವರ ಕೇಳಿಲ್ಲ.

ಅವರು ಅತ್ತ ಹೋಗುತ್ತಲೇ, ಜಾನುಗೆ ಮನೆಯ ನೆನಪು ಕಾಡತೊಡಗಿದೆ. ಮನೆಯಲ್ಲಿ ಈಗ ಪರಿಸ್ಥಿತಿ ಹೇಗಿರಬಹುದು, ಮನೆಯವರು ಏನು ಅಂದುಕೊಂಡಿರಬಹುದು, ಅಪ್ಪ ಅಮ್ಮ ಏನು ಮಾಡುತ್...