Mangalore, ಜನವರಿ 27 -- ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕೋಟೆಕಾರಿನಲ್ಲಿ ಎರಡು ವಾರದ ಹಿಂದೆ ನಡೆದಿದ್ದ ಭಾರೀ ಪ್ರಮಾಣದ ದರೋಡೆ ಪ್ರಕರಣಕ್ಕೆ ಯೋಜನೆ ಹಾಕಿದ್ದು ಬರೋಬ್ಬರಿ ಆರು ತಿಂಗಳಿನಿಂದ. ಇಡೀ ತಂಡ ಮಂಗಳೂರಿನ ಉಲ್ಲಾಳದ ಕೋಟೆಕಾರಿನ ಬ್ಯಾಂಕ್‌ಗೆ ಕನ್ನ ಹಾಕಲು ಸತತ ಆರು ತಿಂಗಳಿನಿಂದ ಭರ್ಜರಿ ಯೋಜನೆಯನ್ನೇ ರೂಪಿಸಿಕೊಂಡಿತ್ತು. ಅದನ್ನು ಯಶಸ್ವಿಯಾಗಿ ಪೂರ್ಣಗೊಳಿಸಿತು ಕೂಡ. ಆದರೆ ಪೊಲೀಸರ ಚಾಣಾಕ್ಷತನದ ಮುಂದೆ ದರೋಡೆಕೋರರ ಕೌಶಲ್ಯತೆ ನಿಲ್ಲಲಿಲ್ಲ. ವಾರದೊಳಗೆ ನಾಲ್ವರು ದರೋಡೆಕೋರರು ಸಿಕ್ಕರು. ದರೋಡೆ ಮಾಡಿಕೊಂಡು ಹೋಗಿದ್ದ ಭಾರೀ ಪ್ರಮಾಣದ ಚಿನ್ನಾಭರಣ, ಹಣವನ್ನೂ ವಶಕ್ಕೆ ಪಡೆಯಲಾಗಿದೆ. ಆದರೆ ವಶಪಡಿಸಿಕೊಂಡು ಬಂಗಾರದ ಲೆಕ್ಕ ಹಾಕಲು ಬೇಕಾಗಿದ್ದು ಬಹುತೇಕ ಒಂದು ದಿನ.

ಘಟನೆ ಕುರಿತಂತೆ ಮಂಗಳೂರು ನಗರ ಪೊಲೀಸ್‌ ಆಯುಕ್ತ ಅನುಪಮ್‌ ಅಗರವಾಲ್‌ ಮಾಹಿತಿ ನೀಡಿದ್ದು, ಈ ದರೋಡೆಗೆ 6ತಿಂಗಳ ಹಿಂದೆಯೇ ಪ್ಲಾನ್ ನಡೆಸಲಾಗಿದೆ. ಪ್ರಮುಖ ಆರೋಪಿ ಮುರುಗನ್‌ಗೆ ಶಶಿ ಥೇವರ್ ಎಂಬಾತ ಕೋಟೆಕಾರ್ ಬ್ಯಾಂಕ್‌ನ ಬಗ್ಗೆ ಮಾಹಿತಿ ನೀಡಿದ್ದ. ...