ಭಾರತ, ಏಪ್ರಿಲ್ 27 -- ಮೊದಲೆಲ್ಲಾ ಬಿಗ್‌ ಬಜೆಟ್ ಸಿನಿಮಾಗಳು ಎಂದರೆ ಬಾಲಿವುಡ್‌, ಹಾಲಿವುಡ್‌ನತ್ತ ಗಮನ ಹೋಗುತ್ತಿತ್ತು. ಆದರೆ ನಂತರದ ದಿನಗಳಲ್ಲಿ ದಕ್ಷಿಣ ಭಾರತದ ಚಿತ್ರರಂಗದಲ್ಲೂ ಸಾಕಷ್ಟು ಬಿಗ್‌ ಬಜೆಟ್‌ ಸಿನಿಮಾಗಳು ನಿರ್ಮಾಣವಾದವು, ಮಾತ್ರವಲ್ಲ ಅವು ದಾಖಲೆಯನ್ನು ನಿರ್ಮಾಣ ಮಾಡಿವೆ. ಇತ್ತೀಚಿನ ದಿನಗಳಲ್ಲಿ ಸೌತ್ ಇಂಡಿಯಾದಲ್ಲಿ ತಯಾರಾಗುತ್ತಿರುವ ಪ್ಯಾನ್ ಇಂಡಿಯಾ ಬಿಗ್ ಬಜೆಟ್ ಸಿನಿಮಾಗಳು ಹಾಲಿವುಡ್‌ ಅನ್ನೂ ಮೀರಿಸುವಂತಿರುವುದು ಸುಳ್ಳಲ್ಲ.

ಬಾಹುಬಲಿ, ಕೆಜಿಎಫ್‌ನಂತಹ ಬಹು ಬಜೆಟ್‌ನ ಸಿನಿಮಾಗಳು ಸಾಕಷ್ಟು ಯಶಸ್ಸು ಗಳಿಸಿವೆ. ಹಾಗಂತ ಎಲ್ಲಾ ಬಿಗ್ ಬಜೆಟ್ ಸಿನಿಮಾಗಳು ಸೂಪರ್ ಹಿಟ್ ಆಗಿವೆ ಅಂತಲ್ಲ. ಸಾಕಷ್ಟು ಹಣ ಸುರಿದು ಮಾಡಿರುವ ಸಿನಿಮಾಗಳು ತೋಪೆದ್ದು ಹೋಗಿದ್ದು ಇದೆ. ಹಾಗಂತ ದಕ್ಷಿಣ ಭಾರತ ಸಿನಿರಂಗದಲ್ಲಿ ಬಿಗ್‌ ಬಜೆಟ್ ಸಿನಿಮಾಗಳ ನಿರ್ಮಾಣ ನಿಂತಿಲ್ಲ. ಮುಂಬರುವ ಕೆಲವು ಬಿಗ್ ಬಜೆಟ್ ಸಿನಿಮಾಗಳ ಬಗ್ಗೆ ಇಲ್ಲಿದೆ ಮಾಹಿತಿ.

ಸೂಪರ್‌ ಸ್ಟಾರ್ ರಜನಿಕಾಂತ್ ನಟನೆಯ ಕೂಲಿ ಸಿನಿಮಾಕ್ಕೆ ಲೋಕೇಶ್ ಕನಕರಾಜ್ ನಿರ್ದೇಶನವಿ...