Bengaluru, ಏಪ್ರಿಲ್ 12 -- ಕೇಂದ್ರ ನಾಗರೀಕ ಸೇವಾ ಕೇಂದ್ರ ( ಯುಪಿಎಸ್‌ಸಿ) ನಡೆಸುವ ಸಿವಿಲ್ ಸರ್ವೀಸ್ ಪರೀಕ್ಷೆ, ಭಾರತದ ಪ್ರಮುಖ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಒಂದಾಗಿದೆ. ಈ ಪರೀಕ್ಷೆ ಮೂಲಕ ಭಾರತೀಯ ಆಡಳಿತಾತ್ಮಕ ಸೇವೆಗಳಾದ ಐಎಎಸ್, ಐಪಿಎಸ್, ಐಎಫ್ಎಸ್ ಮುಂತಾದ ಹಲವಾರು ಪ್ರಮುಖ ಹುದ್ದೆಗಳಿಗೆ ಅಧಿಕಾರಿಗಳನ್ನು ನೇಮಕ ಮಾಡಲಾಗುತ್ತದೆ. ಈ ಪರೀಕ್ಷೆಗೆ ಪ್ರತಿ ವರ್ಷ ಲಕ್ಷಾಂತರ ಅಭ್ಯರ್ಥಿಗಳು ಹಾಜರಾಗುತ್ತಾರೆ. ಆದರೆ, ಪ್ರವೇಶಕ್ಕೆ ಅವಕಾಶ (ಸೀಟು) ಮಾತ್ರ ಅತಿ ಕಡಿಮೆ ಇರುತ್ತವೆ. ಇದರರ್ಥ ಸ್ಪರ್ಧೆಯ ಮಟ್ಟ ಅತ್ಯಂತ ಉಚ್ಛವಾಗಿರುತ್ತದೆ ಹಾಗು ಕಠಿಣವಾಗಿರುತ್ತದೆ.

ಇಷ್ಟು ದೊಡ್ಡ ಪ್ರಮಾಣದ ಸ್ಪರ್ಧಾತ್ಮಕ ಪರೀಕ್ಷೆಯನ್ನು ಗಮನದಲ್ಲಿಟ್ಟುಕೊಂಡು ಹಲವರು ಕೋಚಿಂಗ್ ಕ್ಲಾಸ್‌ಗಳಿಗೆ ಸೇರುತ್ತಾರೆ. ಆದರೆ ಎಲ್ಲರಿಗೂ ಅದಕ್ಕಾಗುವಷ್ಟು ಹಣವಿರುವುದಿಲ್ಲ, ಅಥವಾ ಕೋಚಿಂಗ್ ತರಬೇತಿ ಕೇಂದ್ರಗಳಿರುವ ಜಾಗಗಳಿಗೆ ಎಲ್ಲರಿಂದಲೂ ಹೋಗಲು ಸಾಧ್ಯವಿರುವುದಿಲ್ಲ. ಹಾಗೇ ಸೌಲಭ್ಯವೂ ಇರುವುದಿಲ್ಲ. ಕೆಲವರು ಸ್ವತಂತ್ರವಾಗಿ ಓದುವುದು ಇಷ್ಟಪಡುವವರೂ ಆಗ...