ಭಾರತ, ಏಪ್ರಿಲ್ 27 -- 26ಕ್ಕೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದರ ನಡುವೆಯೂ ಒತ್ತಡ ನಿಭಾಯಿಸಿ 119 ರನ್​ಗಳ ಜೊತೆಯಾಟವಾಡಿದ ವಿರಾಟ್ ಕೊಹ್ಲಿ (51) ಮತ್ತು ಕೃನಾಲ್ ಪಾಂಡ್ಯ (73 ಅಜೇಯ) ಅವರ ಅದ್ಭುತ ಆಟದ ಬಲದಿಂದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು 6 ವಿಕೆಟ್​​ಗಳ ಭರ್ಜರಿ ಗೆಲುವು ದಾಖಲಿಸಿದೆ. ಈ ಜಯದೊಂದಿಗೆ ತವರಿನ ಸೋಲಿಗೆ ಅವರದ್ದೇ ತವರಿನಲ್ಲಿ ಸೇಡು ತೀರಿಸಿಕೊಂಡಿದೆ. ಇದೀಗ ತವರಿನಾಚೆ ಸತತ 6 ಪಂದ್ಯಗಳನ್ನು ಗೆದ್ದಿರುವ ಆರ್​ಸಿಬಿ ಇದೀಗ ಒಟ್ಟು 7 ಗೆಲುವಿನೊಂದಿಗೆ 14 ಅಂಕ ಪಡೆದು ಟೇಬಲ್ ಟಾಪರ್​ ಆಗಿದೆ.

ದೆಹಲಿಯ ಅರುಣ್ ಜೇಟ್ಲಿ ಕ್ರಿಕೆಟ್ ಮೈದಾನದಲ್ಲಿ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಡೆಲ್ಲಿ, ಆರ್​ಸಿಬಿ ಬೌಲರ್​ಗಳ ದಾಳಿಗೆ ತತ್ತರಿಸಿತು. ಇದರ ನಡುವೆಯೂ 20 ಓವರ್​​ ಪೂರ್ಣಗೊಳಿಸಿದ ಡಿಸಿ 8 ವಿಕೆಟ್ ನಷ್ಟಕ್ಕೆ 162 ರನ್ ಕಲೆ ಹಾಕಿತು. ಭುವನೇಶ್ವರ್​ ಕುಮಾರ್ 3 ವಿಕೆಟ್​, ಜೋಶ್ ಹೇಜಲ್​ವುಡ್ 2 ವಿಕೆಟ್ ಪಡೆದು ಅಕ್ಷರ್​ ಪಡೆಯನ್ನು ಕಟ್ಟ...