ಭಾರತ, ಫೆಬ್ರವರಿ 6 -- ಮೊಟ್ಟೆಯಿಂದ ವಿವಿಧ ರೀತಿಯ ಪಾಕವಿಧಾನಗಳನ್ನು ಮಾಡಬಹುದು. ಮೊಟ್ಟೆ ಸಾರು, ಮೊಟ್ಟೆ ಆಮ್ಲೆಟ್, ಮೊಟ್ಟೆ ಘೀ ರೋಸ್ಟ್, ಮೊಟ್ಟೆ ಗ್ರೇವಿ ಇತ್ಯಾದಿ ಖಾದ್ಯಗಳನ್ನು ನೀವು ತಯಾರಿಸಿರಬಹುದು. ಈ ಬಾರಿ ಕೊಲ್ಹಾಪುರಿ ಶೈಲಿಯಲ್ಲಿ ಮೊಟ್ಟೆ ಗ್ರೇವಿ ಮಾಡಿ ನೋಡಿ. ಇದು ಬಹಳ ರುಚಿಕರವಾಗಿರುತ್ತದೆ. ಅನ್ನ, ಚಪಾತಿ ಜೊತೆ ತಿನ್ನಲು ತುಂಬಾ ಚೆನ್ನಾಗಿರುತ್ತದೆ. ರೊಟ್ಟಿ, ನಾನ್ ಜೊತೆ ತಿನ್ನಲು ತುಂಬಾ ರುಚಿಕರವಾಗಿರುತ್ತದೆ. ಕೊಲ್ಹಾಪುರಿ ಮೊಟ್ಟೆ ಗ್ರೇವಿ ತಯಾರಿಸುವುದು ಹೇಗೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಬೇಕಾಗುವ ಪದಾರ್ಥಗಳು: ಅಡುಗೆ ಎಣ್ಣೆ- ಮೂರು ಚಮಚ, ಅರಿಶಿನ- ಕಾಲು ಚಮಚ, ಮೆಣಸಿನ ಪುಡಿ- ಒಂದು ಚಮಚ, ಬೇಯಿಸಿದ ಮೊಟ್ಟೆ- ಆರು, ತುರಿದ ತೆಂಗಿನಕಾಯಿ- ಅರ್ಧ ಕಪ್, ಲವಂಗ- ಆರು, ದಾಲ್ಚಿನ್ನಿ- ಒಂದು ಸಣ್ಣ ತುಂಡು, ಏಲಕ್ಕಿ- ನಾಲ್ಕು, ಕಾಳುಮೆಣಸು- ಅರ್ಧ ಚಮಚ, ಜೀರಿಗೆ- ಎರಡು ಚಮಚ, ಕೊತ್ತಂಬರಿ ಸೊಪ್ಪು- ಅರ್ಧ ಕಪ್, ಬಿಳಿ ಎಳ್ಳು- ಎರಡು ಚಮಚ, ಹಸಿ ಮೆಣಸಿನಕಾಯಿ- 2, ಟೊಮೆಟೊ- ಎರಡು, ಈರುಳ್ಳಿ- ಎರಡು, ಕಾ...