ಭಾರತ, ಜನವರಿ 29 -- ಕೊರಿಯನ್ನರ ಬ್ಯೂಟಿ ಟಿಪ್ಸ್ ಭಾರತದಲ್ಲಿ ಇತ್ತೀಚೆಗೆ ಸಾಕಷ್ಟು ಜನಪ್ರಿಯತೆ ಗಳಿಸಿದೆ. ಕೊರಿಯನ್ನರ ತ್ವಚೆಯ ಕಾಳಜಿಯಲ್ಲಿ ಅವರು ತಿನ್ನುವ ಆಹಾರವು ಕೂಡ ಪ್ರಮುಖ ಪಾತ್ರ ವಹಿಸುತ್ತಿದೆ. ಹೀಗಾಗಿ ಕೊರಿಯನ್ ಪಾಕಪದ್ಧತಿಯ ವಿಡಿಯೋಗಳು ಸಹ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಅದರಲ್ಲೂ ಕೊರಿಯನ್ ನೂಡಲ್ಸ್ ಅನ್ನು ಅನೇಕರು ಮೆಚ್ಚಿದ್ದಾರೆ. ಇದು ವಿಭಿನ್ನ ರುಚಿ ಹೊಂದಿರುವುದರಿಂದ ಸಾಕಷ್ಟು ಮಂದಿಗೆ ಬಹಳ ಇಷ್ಟವಾಗಿದೆ. ನೀವು ಕೊರಿಯನ್ ಪಾಕವಿಧಾನವನ್ನು ಪ್ರಯತ್ನಿಸಲು ಬಯಸಿದರೆ ಮತ್ತು ಕೊರಿಯನ್ ಆಹಾರದ ರುಚಿ ನೋಡದಿದ್ದರೆ, ಆಲೂಗಡ್ಡೆ ಚಿಲ್ಲಿ ಮಾಡಿ ನೋಡಿ. ಇದು ತುಂಬಾ ರುಚಿಯಾಗಿರುತ್ತದೆ. ಕೊರಿಯನ್ ಆಲೂಗಡ್ಡೆ ಚಿಲ್ಲಿ ತಯಾರಿಸುವುದು ಹೇಗೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ,

ಬೇಕಾಗುವ ಪದಾರ್ಥಗಳು: ಆಲೂಗಡ್ಡೆ- ನಾಲ್ಕು, ಕಾರ್ನ್ ಫ್ಲೋರ್ (ಜೋಳದ ಹಿಟ್ಟು)- ನಾಲ್ಕು ಚಮಚ, ಎಣ್ಣೆ- ಅಗತ್ಯಕ್ಕೆ ತಕ್ಕಷ್ಟು, ಬೆಳ್ಳುಳ್ಳಿ ಎಸಳು- 5, ಸೋಯಾ ಸಾಸ್- ಎರಡು ಚಮಚ, ಕೊತ್ತಂಬರಿ ಸೊಪ್ಪು- 1 ಚಮಚ, ಕಾಶ್ಮೀರಿ ಕ...