Koppal, ಫೆಬ್ರವರಿ 24 -- ಕೊಪ್ಪಳದಲ್ಲಿ ಶಿವರಾತ್ರಿ ಅಂಗವಾಗಿ ತೋಟಗಾರಿಕೆ ಇಲಾಖೆಯು ಹಣ್ಣು ಹಾಗೂ ಜೇನು ಹಬ್ಬವನ್ನು ಆಯೋಜಿಸಿದೆ. ಬಗೆಬಗೆಯ ಹಣ್ಣುಗಳ ಪ್ರದರ್ಶನ ಹಾಗೂ ಮಾರಾಟಕ್ಕೆ ಅವಕಾಶ ಮಾಡಿಕೊಡಲಾಗಿದೆ. ಈ ಬಾರಿ ಕೊಪ್ಪಳದ ಹಣ್ಣುಗಳ ಪ್ರದರ್ಶನದಲ್ಲಿ ಗಮನ ಸೆಳೆಯುತ್ತಿರುವ ಕೆಜಿಗೆ 8 ಲಕ್ಷ ರೂ. ಬೆಲೆ ಬಾಳುವ ಜಪಾನ್‌ ಮೂಲದ ರೂಬಿ ರೂಮನ್‌ ದ್ರಾಕ್ಷಿ ಹಣ್ಣು. ಇದನ್ನು ಮಾರಾಟಕ್ಕೆ ಇರಿಸಿಲ್ಲವಾದರೂ ದುಬಾರಿ ಹಣ್ಣುಗಳು ಹೇಗಿರಲಿವೆ. ಅದರ ವಿಶೇಷತೆಯೇನು. ನಮ್ಮ ಭಾಗದಲ್ಲೂ ಈ ಹಣ್ಣನ್ನು ರೈತರು ಬೆಳೆಯಲು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕರ್ನಾಟಕ ತೋಟಗಾರಿಕೆ ಇಲಾಖೆಯು ಪ್ರದರ್ಶನದಲ್ಲಿ ಈ ಹಣ್ಣುಗಳನ್ನು ಇರಿಸಿದೆ. ಜನರು, ಕೃಷಿಕರು, ತೋಟಗಾರಿಕೆ ಹಣ್ಣುಗಳ ಮಾರಾಟಗಾರರು ರೂಬಿ ರೋಮನ್‌ ಹಣ್ಣಿನ ಬಗ್ಗೆಯೇ ಮಾಹಿತಿ ಪಡೆಯುತ್ತಿದ್ದಾರೆ. ಈ ಹಣ್ಣನ್ನು ಹೇಗೆ ಬೆಳೆಯಬಹುದು. ನಮ್ಮ ಪರಿಸರ, ಮಣ್ಣಿಗ ಇದು ಒಗ್ಗುತ್ತದೆಯೇ ಎನ್ನುವ ಮಾಹಿತಿಯನ್ನು ಆಸಕ್ತಿಯಿಂದಲೇ ಕೇಳುತ್ತಿದ್ದಾರೆ. ಕಳೆದ ವರ್ಷದ ಹಣ್ಣುಗಳ ಪ್ರದರ್ಶನದ ವೇಳೆ ಮಿಯಾಜಾಕಿ ಅನ...