Bengaluru, ಮಾರ್ಚ್ 21 -- Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಗುರುವಾರ ಮಾರ್ಚ್ 20ರ ಸಂಚಿಕೆಯಲ್ಲಿ ವೀಣಾ, ಸಂತೋಷ್ ಜತೆ ಮಾತನಾಡುತ್ತಾ, ನಾವು ಇನ್ನೂ ಎಷ್ಟು ದಿನ ಸುಳ್ಳು ಹೇಳಿಕೊಂಡು ಬದುಕಬೇಕು ಎನ್ನುತ್ತಾಳೆ. ಆಗ ಸಂತೋಷ್ ವೀಣಾ ಬಳಿ, ಇನ್ನೂ ಸ್ವಲ್ಪ ದಿನ ಅಡ್ಜಸ್ಟ್ ಮಾಡಿಕೊಳ್ಳಿ. ನಂತರ ನಾನೇ ಹೇಳುವೆ ಎಂದು ಸಂತೋಷ್ ಹೇಳುತ್ತಾನೆ. ಆಗ ವೀಣಾ, ನೀವು ಅತ್ತೆ ಮಾವನ ಬಳಿ ಈ ವಿಚಾರ ಹೇಳದಿದ್ದರೆ, ನಾನೇ ಮುಂದೆ ಬಂದು ಅವರಲ್ಲಿ ಮನೆ ಕಟ್ಟುವ ವಿಚಾರ ಹೇಳುವೆ ಎಂದು ಹೇಳುತ್ತಾಳೆ. ಅದಕ್ಕೆ ಸಂತೋಷ್, ಬೇಡ ಎಂದು ಹೇಳುತ್ತಾನೆ.

ಮತ್ತೊಂದೆಡೆ ಮರಿಗೌಡ, ಸಿದ್ದೇಗೌಡ ಮತ್ತು ಭಾವನಾರನ್ನು ಹನಿಮೂನ್‌ಗೆ ಕಳುಹಿಸಲು ಪ್ಲ್ಯಾನ್ ಮಾಡಿದ್ದಾನೆ. ಆಗ ವಿನು ಮರಿಗೌಡನ ಮಾತನ್ನು ಕೇಳಿಸಿಕೊಳ್ಳುತ್ತಾಳೆ. ಅವಳು ನಾವೇ ಹೊರಗಡೆ ಟೂರ್ ಹೋಗುತ್ತಿದ್ದೇವೆ ಎಂದುಕೊಳ್ಳುತ್ತಾಳೆ. ಅದಕ್ಕಾಗಿ ಗಂಡನ ಬಳಿ ಅವಳು ಕೇಳುತ್ತಾಳೆ, ಆದರೆ ಅವನು ಮಾತು ಬದಲಾಯಿಸಿ, ಅಲ್ಲಿಂದ ಹೊರಡುತ್ತಾನೆ. ಜತೆಗೆ, ಸಿದ್ದೇಗೌಡನನ್ನು ಕರೆಸಿ, ಅವನ ಬಳ...