Bengaluru, ಏಪ್ರಿಲ್ 19 -- Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯ ಶುಕ್ರವಾರ ಏಪ್ರಿಲ್ 18ರ ಸಂಚಿಕೆಯಲ್ಲಿ ಭಾಗ್ಯ, ಸುಂದರಿಯನ್ನು ಕರೆದುಕೊಂಡು ಆಹಾರ ಇಲಾಖೆಗೆ ಹೋಗಿದ್ದಾಳೆ. ಅಲ್ಲಿ ಫುಡ್ ಲೈಸನ್ಸ್ ಬಗ್ಗೆ ವಿಚಾರಿಸಿದಾಗ, ಅಧಿಕಾರಿ ಭಾಗ್ಯ ಕೊಟ್ಟಿದ್ದ ಸ್ಯಾಂಪಲ್ ಆಹಾರವನ್ನು ಒಂದು ದಿನ ಬಿಟ್ಟು, ಹಾಳಾದ ಬಳಿಕ ಟೆಸ್ಟ್‌ಗೆ ಕಳುಹಿಸುವ ಬಗ್ಗೆ ಮಾತನಾಡಿದ್ದಾರೆ. ಅದರಿಂದ ಆಹಾರ ಕೆಟ್ಟು ಹೋಗಿ ಲೈಸನ್ಸ್ ಸಿಗುವುದಿಲ್ಲ ಎನ್ನುವುದು ಅಧಿಕಾರಿಯ ಲೆಕ್ಕಾಚಾರವಾಗಿದೆ. ಆದರೆ ಅಧಿಕಾರಿಯ ಈ ಕುತಂತ್ರವನ್ನು ಭಾಗ್ಯ ಪ್ರಶ್ನಿಸಿದ್ದಾಳೆ. ಅಲ್ಲದೆ, ಈ ಕೆಲಸ ಮಾಡಲು ಕನ್ನಿಕಾ ನಿಮಗೆ ಎಷ್ಟು ದುಡ್ಡು ಕೊಟ್ಟಿದ್ದಾಳೆ ಎನ್ನುವುದನ್ನು ಪ್ರಶ್ನಿಸಿದ್ದಾಳೆ. ಆಗ ಅಧಿಕಾರಿಗೆ ಇವಳಿಗೆ ಎಲ್ಲವೂ ಗೊತ್ತಾಗಿದೆ ಎಂದು ಅರಿವಾಗುತ್ತದೆ. ಹೀಗಾಗಿ ಆತ, ನೀನು ಏನು ಬೇಕಾದರೂ ಮಾಡಿಕೋ, ಲೈಸನ್ಸ್ ನಿನಗೆ ಸಿಗುವುದಿಲ್ಲ ಎಂದು ಹೇಳುತ್ತಾನೆ.

ಅದನ್ನು ಕೇಳಿ ಭಾಗ್ಯಗೆ ಮತ್ತಷ್ಟು ಕೋಪ ಬರುತ್ತದೆ. ಹೀಗಾಗಿ ಅವಳು ಕೋಪವನ್ನು ತೋರಿಸಿಕೊಡದೆ, ನೀವು...