ಭಾರತ, ಮಾರ್ಚ್ 6 -- ಅಮೃತಧಾರೆ ಧಾರಾವಾಹಿಯ ಕೆಲವೊಂದು ಅಧ್ಯಾಯಗಳು ಪಟಪಟನೆ ಮುಗಿದಿವೆ. ಭೂಮಿಕಾ ಅಳು, ಭೂಮಿಕಾಳೇ ಮುಂದೆ ನಿಂತು ಗೌತಮ್‌ಗೆ ಮದುವೆ ಮಾಡಿಸುವಂತಹ "ಅಸಾಧ್ಯ" ಘಟನೆಗಳಿಗೆ ಜೀ ಕನ್ನಡ ವಾಹಿನಿಯ ಅಮೃತಧಾರೆ ನಿರ್ದೇಶಕರು ಕೊನೆ ಹಾಡಲು ಮುಂದಾಗಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಬಂದ ಪ್ರತಿಕ್ರಿಯೆಗಳ ಪರಿಣಾಮವೋ ಎಂಬಂತೆ ಕೊನೆಗೂ ಗೌತಮ್‌ ತಾಳಿ ಕಟ್ಟಿದ್ದಾನೆ.

ಜೀ ಕನ್ನಡ ವಾಹಿನಿ ಇಂದು ಬಿಡುಗಡೆ ಮಾಡಿರುವ ಪ್ರೊಮೊದಲ್ಲಿ ಗೌತಮ್‌ ಮದುವೆಯ ದೃಶ್ಯವಿದೆ. ಮದುಮಗನ ಉಡುಗೆಯಲ್ಲಿ ಗೌತಮ್‌ ಕುಳಿತಿದ್ದಾನೆ. ಹಸೆಮಣೆಯ ಮೇಲೆ ಮಧುರಾ ಕೂಡ ಕುಳಿತಿದ್ದಾಳೆ. ಈ ಮೂಲಕ ಗೌತಮ್‌ ಮಾತು ಕೇಳದೆ ಎಲ್ಲರೂ ಮಧುರಾಳ ಜತೆ ಮದುವೆ ಮಾಡಿಸಲು ಸಜ್ಜಾಗಿದ್ದಾರೆ.

ಈ ಮದುವೆಗೆ ಗೌತಮ್‌ ಹೇಗೆ ಒಪ್ಪಿದ, ಎಲ್ಲರ ಹಠಕ್ಕೆ ಸೋತು ಮದುವೆಗೆ ಒಪ್ಪಿಕೊಂಡಿದ್ದಾನೆಯೇ ಅಥವಾ ಎಲ್ಲರಿಗೂ ಪಾಠ ಕಲಿಸುವೆ ಎಂದು ಮದುವೆಗೆ ಒಪ್ಪಿಕೊಂಡನೋ ಎಂದು ತಿಳಿಯದು. ಹಸೆಮಣೆಯ ಮೇಲೆ ಮೊದಲು ಮಧುರಾ ಗೌತಮ್‌ ಕೊರಳಿಗೆ ಹಾರ ಹಾಕುತ್ತಾಳೆ.

ಇದಾದ ಬಳಿಕ ಮಧುರಾಳ ಕೊರಳಿಗೆ ಗ...