Bengaluru, ಮಾರ್ಚ್ 11 -- Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಸೋಮವಾರ ಮಾರ್ಚ್ 10ರ ಸಂಚಿಕೆಯಲ್ಲಿ ಜಯಂತ್ ಮತ್ತೆ ತನ್ನ ದುರ್ಬುದ್ಧಿ ತೋರಿಸಿದ್ದಾನೆ. ಜಾಹ್ನವಿ ಅಜ್ಜಿ ಆರಾಮವಾಗಿರಲಿ ಮತ್ತು ಸುರಕ್ಷಿತವಾಗಿರಲಿ ಎಂದು ಅವರನ್ನು ಮನೆಗೆ ಕಳುಹಿಸಿದ್ದಾಳೆ. ಆದರೆ ಅಜ್ಜಿ ಕೋಮಾದಿಂದ ಎಚ್ಚರಗೊಂಡು, ಪ್ರಜ್ಞೆ ಮರಳಿ ಬಂದರೆ ಅದರಿಂದ ತನಗೆ ತೊಂದರೆ ಎಂದು ಜಯಂತ್‌ಗೆ ಅರಿವಿದೆ. ಹೀಗಾಗಿ ಅವನು ಜಾಹ್ನವಿ ತವರು ಮನೆಗೆ ಹೋಗಿ, ಅಜ್ಜಿಯ ರೂಮ್‌ನಲ್ಲಿ ಕೂಡ ಒಂದು ಕ್ಯಾಮೆರಾ ಇರಿಸುವ ಪ್ಲ್ಯಾನ್ ಮಾಡಿದ್ದಾನೆ. ಅದರ ಮೂಲಕ ಅಜ್ಜಿಯ ಕುರಿತು ತಿಳಿಯಬಹುದು, ಅಜ್ಜಿ ಎಚ್ಚರಗೊಂಡರೆ ನನಗೆ ಸಮಸ್ಯೆಯಾಗಬಹುದು. ಹೀಗಾಗಿ ಎಚ್ಚರಿಕೆ ವಹಿಸಬೇಕು ಎನ್ನುವುದು ಜಯಂತ್‌ ಯೋಚನೆಯಾಗಿದೆ. ಅದಕ್ಕಾಗಿ ಅವನು ಆಫೀಸ್‌ಗೆ ಹೋಗದೇ ನೇರವಾಗಿ ಜಾಹ್ನವಿ ತವರು ಮನೆಗೆ ಹೋಗಿದ್ದಾನೆ.

ಯಾವುದೇ ಸೂಚನೆ ಕೊಡದೇ, ನೇರವಾಗಿ ಮನೆಗೆ ಬಂದ ಜಯಂತ್‌ನ ಕಂಡು ಶ್ರೀನಿವಾಸ್ ಮತ್ತು ಲಕ್ಷ್ಮೀ ದಂಪತಿಗೆ ಖುಷಿಯಾಗಿದೆ. ಆದರೆ ಅಳಿಯ ಒಬ್ಬನೇ ಮನೆಗೆ ಬಂದಿರುವು...