ಭಾರತ, ಏಪ್ರಿಲ್ 14 -- ಸತತ 5 ಸೋಲುಗಳಿಂದ ಕಂಗೆಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ ಕೊನೆಗೂ ಜಯದ ಹಳಿಗೆ ಮರಳಿದೆ. ಶಿವಂ ದುವೆ (43*), ಎಂಎಸ್ ಧೋನಿ (26*) ಬ್ಯಾಟಿಂಗ್ ಮತ್ತು ರವೀಂದ್ರ ಜಡೇಜಾ ಬೌಲಿಂಗ್ (24/2) ಬಲದಿಂದ ಸಿಎಸ್​​ಕೆ 5 ವಿಕೆಟ್​ ಗೆಲುವು ದಾಖಲಿಸಿತು. ಪ್ರಸ್ತುತ ಆಡಿದ 7ರಲ್ಲಿ 2 ಗೆಲುವು, 5 ಸೋಲು ಕಂಡಿರುವ ಸೂಪರ್ ಕಿಂಗ್ಸ್​ ಪ್ಲೇಆಫ್​ ಹಾದಿ ಸುಲಭವಾಗಬೇಕೆಂದರೆ ಉಳಿದ 7 ಪಂದ್ಯಗಳನ್ನೂ ಗೆಲ್ಲುವುದು ಅಗತ್ಯ. ಗೆದ್ದರೂ ಸಿಎಸ್​ಕೆ ಅಂಕಪಟ್ಟಿಯಲ್ಲಿ 10ನೇ ಸ್ಥಾನದಲ್ಲೇ ಮುಂದುವರೆದಿದೆ. ಟೂರ್ನಿಯಲ್ಲಿ 3ನೇ ಸೋಲು ಕಂಡ ಲಕ್ನೋ ಪಾಯಿಂಟ್ಸ್ ಟೇಬಲ್​ನಲ್ಲಿ 4ನೇ ಸ್ಥಾನದಲ್ಲಿದೆ.

ಲಕ್ನೋದ ಏಕನಾ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಚೆನ್ನೈ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿತು. 2025ರಲ್ಲಿ ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಪಂತ್ ಅವರ ಆಟದ ಬಲದಿಂದ ಎಲ್​ಎಸ್​ಜಿ ಸಾಧಾರಣ ಮೊತ್ತ ಕಲೆ ಹಾಕಿತು. 20 ಓವರ್​​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 167 ರನ್ ಗಳಿಸಿತು....