ಭಾರತ, ಮೇ 6 -- ಮುಂಬೈ ಇಂಡಿಯನ್ಸ್‌ ವಿರುದ್ಧದ ಐಪಿಎಲ್‌ ಪಂದ್ಯಕ್ಕೂ ಮುನ್ನ ಗುಜರಾತ ಟೈಟನ್ಸ್‌ ತಂಡಕ್ಕೆ ಆನೆಬಲ ಬಂದಿದೆ. ಮಾದಕ ದ್ರವ್ಯ ಸೇವನೆ ಆರೋಪದ ಮೇಲೆ ಒಂದು ತಿಂಗಳ ನಿಷೇಧಕ್ಕೆ ಒಳಗಾಗಿದ್ದ ಗುರಿಯಾಗಿದ್ದ ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಕಗಿಸೊ ರಬಾಡ, ಮಂಗಳವಾರ (ಮೇ 6) ಮುಂಬೈನಲ್ಲಿ ನಡೆಯಲಿರುವ ಮುಂಬೈ ಇಂಡಿಯನ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಜಿಟಿ ತಂಡಕ್ಕೆ ಮರಳಲಿದ್ದಾರೆ. ಮಾರ್ಚ್ 29ರಂದು ಕೊನೆಯ ಬಾರಿಗೆ ಐಪಿಎಲ್‌ ಪಂದ್ಯದಲ್ಲಿ ಆಡಿದ್ದ ಅವರು, ಆ ನಂತರ ತವರು ನೆಲಕ್ಕೆ ಮರಳಿದ್ದರು. ಮುಂಬೈ ಇಂಡಿಯನ್ಸ್ ವಿರುದ್ಧವೇ ಕೊನೆಯ ಬಾರಿಗೆ ಆಡಿದ್ದ ಅವರು, ನಿನ್ನೆಯಷ್ಟೇ (ಸೋಮವಾರ, ಮೇ 5) ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ತಂಡದ ಪೂರ್ವ ತರಬೇತಿ ಅವಧಿಯಲ್ಲಿ ಕಾಣಿಸಿಕೊಂಡಿದ್ದರು.

ಕೊನೆಯ ಬಾರಿಗೆ ರಬಾಡ ಗುಜರಾತ್‌ ತಂಡದಲ್ಲಿ ಆಡದಿದ್ದಾಗ, ವೈಯಕ್ತಿಕ ಕಾರಣಗಳಿಂದ ಅವರು ದಕ್ಷಿಣ ಆಪ್ರಿಕಾ ತೆರಳಿದ್ದಾರೆ ಎಂದು ಗುಜರಾತ್‌ ತಂಡ ಹೇಳಿತ್ತು. ಆದರೆ, ಡೋಪಿಂಗ್‌ ಟೆಸ್ಟ್‌ನಲ್ಲಿ ವಿಫಲರಾದ ಕಾರಣದಿಂದ ಅವರು ಐಪಿಎಲ್‌ನಲ...