Bengaluru, ಏಪ್ರಿಲ್ 5 -- Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯ ಶುಕ್ರವಾರ ಏಪ್ರಿಲ್ 4ರ ಸಂಚಿಕೆಯಲ್ಲಿ ಭಾಗ್ಯ ಸೈಕಲ್‌ನಲ್ಲಿ ಊಟ ತೆಗೆದುಕೊಂಡು ಹೋಗುತ್ತಿದಾಗ, ಸೈಕಲ್ ಪಂಚರ್ ಆಗಿದೆ. ಸೈಕಲ್ ಪಂಚರ್ ಆಗಿರುವುದನ್ನು ಕಂಡು ಅವಳು ಚಿಂತೆಗೊಳಗಾಗಿದ್ದಾಳೆ. ಅಲ್ಲೇ ಪಕ್ಕದಲ್ಲಿ ಇದ್ದ ಸೈಕಲ್ ಶಾಪ್‌ಗೆ ಹೋದಾಗ, ಅವನು ಸ್ವಲ್ಪ ಸಮಯ ತಗಲಬಹುದು, ನೀವು ಕಾಯಬೇಕು ಎನ್ನುತ್ತಾನೆ. ಆದರೆ ಭಾಗ್ಯಗೆ ಸಮಯವಿಲ್ಲ, ಅಲ್ಲದೇ, ಊಟ ಬುಕ್ ಮಾಡಿದವರು, ಮೇಲಿಂದ ಮೇಲೆ ಕರೆ ಮಾಡಿ, ಊಟ ಕಳಿಸಿ ಎಂದು ಕೇಳುತ್ತಿದ್ದಾರೆ. ಹೀಗಾಗಿ ಸೈಕಲ್ ಪಂಚರ್ ಹಾಕಲು ತಾನೇ ಮುಂದಾಗಿದ್ದಾಳೆ ಭಾಗ್ಯ.

ಪಂಚರ್ ಶಾಪ್‌ನವನ ಬಳಿ ಟೂಲ್ಸ್ ಕೇಳಿ ಪಡೆದುಕೊಂಡ ಭಾಗ್ಯ, ತಾನೇ ಎಲ್ಲವನ್ನು ಕೂತು ಸರಿಪಡಿಸುತ್ತಿದ್ದಾಳೆ. ಕೈನೋವು ಬಂದರೂ, ಟ್ಯೂಬ್‌ನ ಬಿಸಿ ತಾಗಿದರೂ ಅವಳು ಲೆಕ್ಕಿಸದೇ, ಊಟ ಕೊಡಬೇಕು ಎನ್ನುವ ಗಡಿಬಿಡಿಯಲ್ಲಿ ಬೇಗಬೇಗನೇ ರಿಪೇರಿ ಮಾಡುತ್ತಿದ್ದಾಳೆ. ನಂತರ ರಿಪೇರಿ ಕೆಲಸ ಮಾಡಿ ಮುಗಿಸಿ, ಅಲ್ಲಿಂದ ಎದ್ದು ಹೊರಟಿದ್ದಾಳೆ. ಭಾಗ್ಯ ಜಾಣ್ಮೆಯನ್ನು ಸೈ...