ಭಾರತ, ಏಪ್ರಿಲ್ 20 -- ಕೊನೆಗೂ ಲಯಕ್ಕೆ ಮರಳಿದ ರೋಹಿತ್​ ಶರ್ಮಾ (76*) ಮತ್ತು ಸೂರ್ಯಕುಮಾರ್ ಯಾದವ್ (68*) ಅವರ ಸ್ಫೋಟಕ ಅರ್ಧಶತಕ ಮತ್ತು ಅದ್ಭುತ ಫೀಲ್ಡಿಂಗ್​ ಬಲದಿಂದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ 9 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಇದು ಮುಂಬೈಗೆ ದಕ್ಕಿದ ಹ್ಯಾಟ್ರಿಕ್ ಗೆಲುವಾದರೆ, ಸಿಎಸ್​ಕೆಗೆ ಒಟ್ಟಾರೆ 6ನೇ ಸೋಲು. ಪ್ಲೇಆಫ್ ರೇಸ್​​ನಲ್ಲಿ ಉಳಿಯಬೇಕಾದರೆ ಸಿಎಸ್​ಕೆ ಉಳಿದ ಆರೂ ಪಂದ್ಯಗಳನ್ನು ಗೆಲ್ಲುವುದು ಅಗತ್ಯ.

ಮುಂಬೈನ ವಾಂಖೆಡೆ ಕ್ರಿಕೆಟ್ ಮೈದಾನದಲ್ಲಿ ನಡೆದ ಐಪಿಎಲ್​ 38ನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸಿಎಸ್​ಕೆ, ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತು. ಶಿವಂ ದುಬೆ (50) ಮತ್ತು ರವೀಂದ್ರ ಜಡೇಜಾ (53) ತಲಾ ಅರ್ಧಶತಕ ಸಿಡಿಸಿ ಮಿಂಚಿದರು. 177 ರನ್ ಗುರಿ ಬೆನ್ನಟ್ಟಿದ ಮುಂಬೈ 15.4 ಓವರ್​ಗಳಲ್ಲೇ ಜಯಭೇರಿ ಬಾರಿಸಿತು. ರೋಹಿತ್, ಸೂರ್ಯ ಬಿರುಸಿನ ಬ್ಯಾಟಿಂಗ್ ನಡೆಸಿ ಪಂದ್ಯದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

Published by H...