Bengaluru, ಮಾರ್ಚ್ 17 -- ಅಡುಗೆಗೆ ಕೊತ್ತಂಬರಿ ಸೊಪ್ಪು ಬೆರೆಸುವುದರಿಂದ ಯಾವುದೇ ಖಾದ್ಯದ ರುಚಿ ದ್ವಿಗುಣಗೊಳ್ಳುತ್ತದೆ. ಹೀಗಾಗಿ ಮಾರುಕಟ್ಟೆಯಲ್ಲಿ ಕೊತ್ತಂಬರಿ ಸೊಪ್ಪಿನ ಮಾರಾಟವೂ ಹೆಚ್ಚಾಗಿದೆ. ಮಾಂಸಾಹಾರಿ ಖಾದ್ಯಗಳಿ ಹಿಡಿದು ಸಸ್ಯಾಹಾರಿ ಖಾದ್ಯದವರೆಗೆ ಕೊತ್ತಂಬರಿ ಸೊಪ್ಪನ್ನು ಬಳಸಲಾಗುತ್ತದೆ. ಹೀಗಾಗಿ ಬಹುತೇಕ ಮಂದಿ ಕೊತ್ತಂಬರಿ ಸೊಪ್ಪನ್ನು ಖರೀದಿಸುತ್ತಾರೆ. ಆದರೆ ಬೇಸಿಗೆಯಲ್ಲಿ ಕೊತ್ತಂಬರಿಯನ್ನು ಸರಿಯಾಗಿ ಸಂಗ್ರಹಿಸಬೇಕು. ಇಲ್ಲದಿದ್ದರೆ ಆಹಾರದ ರುಚಿ ಬದಲಾಗುತ್ತದೆ. ಇದನ್ನು ಸರಿಯಾದ ರೀತಿಯಲ್ಲಿ ಫ್ರಿಜ್‌ನಲ್ಲಿ ಸಂಗ್ರಹಿಸಿದರೂ, ಅದು ದೀರ್ಘಕಾಲ ತಾಜಾವಾಗಿರುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ಕೊತ್ತಂಬರಿ ಸೊಪ್ಪನ್ನು ಖರೀದಿಸುವಾಗ ಅದನ್ನು ಒಂದು ವಾರದವರೆಗೆ ತಾಜಾವಾಗಿಡುವುದು ಹೇಗೆ ಎಂಬ ಬಗ್ಗೆ ಇಲ್ಲಿ ಟಿಪ್ಸ್ ನೀಡಲಾಗಿದೆ.

ಕೊತ್ತಂಬರಿ ಸೊಪ್ಪನ್ನು ಒಮ್ಮೆ ನೀರಿನಿಂದ ಒದ್ದೆ ಮಾಡಿ ಸ್ವಚ್ಛಗೊಳಿಸಿ. ನಂತರ ಕೊತ್ತಂಬರಿ ಸೊಪ್ಪನ್ನು ಬೇರುಗಳನ್ನು ಸೇರಿಸಿ ಟಿಶ್ಯೂ ಪೇಪರ್‌ನಿಂದ ಸುತ್ತಿಡಿ. ಅದನ್ನು ಸುತ್ತಿದ ನಂತರ,...