Kodagu, ಮೇ 25 -- ಮಡಿಕೇರಿ: ವನ್ಯಜೀವಿ,ಅರಣ್ಯಕ್ಕೆ ಸಂಬಂಧಿಸಿದಂತೆ ಸಾಕಷ್ಟು ಸಮಸ್ಯೆಗಳಿದ್ದರೂ ಕೊಡಗು ಅರಣ್ಯ ವೃತ್ತಕ್ಕೆ ಕಾಯಂ ಅಧಿಕಾರಿ ನೇಮಿಸಲು ಮೀನ ಮೇಷ ಮಾಡುತ್ತಲೇ ಇದ್ದ ಕರ್ನಾಟಕ ಸರ್ಕಾರ ಕೊನೆಗೂ ಅಧಿಕಾರಿಯೊಬ್ಬರನ್ನು ನೇಮಕ ಮಾಡಿದೆ. ಐದು ತಿಂಗಳ ಹಿಂದೆಯಷ್ಟೇ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆಗೆ ಬಡ್ತಿ ಪಡೆದು ಚಿಕ್ಕಮಗಳೂರಿನ ಕಾರ್ಯಯೋಜನೆ ವಿಭಾಗದಲ್ಲಿಯೇ ಮುಂದುವರಿದಿದ್ದ ಸೋನಾಲ್ ವ್ರಿಶ್ನಿ ಅವರನ್ನು ಕೊಡಗು ವೃತ್ತ ಅರಣ್ಯ ಸಂರಕ್ಷಣಾಧಿಕಾರಿಯನ್ನಾಗಿ ಸರ್ಕಾರ ನೇಮಿಸಿ ಆದೇಶ ಹೊರಡಿಸಿದೆ. ಸುಮಾರು ಐದು ತಿಂಗಳಿನಿಂದ ಈ ಹುದ್ದೆ ಖಾಲಿ ಇತ್ತು. ಇದಕ್ಕೂ ಮೊದಲು ಕೂಡ ಈ ಹುದ್ದೆಗೆ ಯಾರನ್ನೂ ನೇಮಿಸಿರಲಿಲ್ಲ. ಕೊಡಗು ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದ ಮನೋಜ್ ತ್ರಿಪಾಠಿ ಅವರು ಬಡ್ತಿ ಪಡೆದು ಉನ್ನತ ಹುದ್ದೆಗೆ ಹೋಗಿದ್ದರಿಂದ ಈ ಹುದ್ದೆ ಖಾಲಿ ಇತ್ತು. ಈಗ ಸೋನಾಲ್ ವ್ರಿಶ್ನಿ ಅವರ ನೇಮಕವಾಗಿದೆ.
ಸೋನಾಲ್ ಅವರು ಮೂಲತಃ ಉತ್ತರ ಪ್ರದೇಶದವರು 2011ನೇ ಬ್ಯಾಚ್‌ನ ಐಎಫ್‌ಎಸ್ ಅಧಿಕಾರಿ. ಗದಗ, ಧಾರವಾ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.