ಭಾರತ, ಏಪ್ರಿಲ್ 18 -- ಬೇಸಿಗೆ ಬಿರುಬಿಸಿಲಿಗೆ ತಂಪಾದ ಸ್ಥಳದ ಹುಡುಕಾಟದಲ್ಲಿರುವವರಿಗೆ ಕರ್ನಾಟಕದಲ್ಲಿ ಮಡಿಕೇರಿ ಅತ್ಯುತ್ತಮ ಸ್ಥಳ. ಇದು ಬ್ಯಾಡ್ಮಿಂಟನ್‌ ತಾರೆ ಪಿವಿ ಸಿಂಧು ಅವರಿಗೂ ಗೊತ್ತಾದಂತಿದೆ. ಮಡಿಕೇರಿಯಲ್ಲಿರುವ ಸುಂದರ ಪರಿಸರದಲ್ಲಿರುವ ಕಾಫಿ ಎಸ್ಟೇಟ್‌ಗೆ ಒಲಿಂಪಿಕ್ಸ್‌ ಪದಕ ವಿಜೇತ ಷಟ್ಲರ್‌ ಭೇಟಿ ನೀಡಿದ್ದಾರೆ. ಕೆಲವು ದಿನಗಳ ಕಾಲ ಅಲ್ಲಿಯೇ ಉಳಿದುಕೊಂಡಿದ್ದ ಸಿಂಧು, ತಂಪಾದ ಸ್ಥಳದಲ್ಲಿ ಬೇಸಿಗೆ ಕಳೆದಿದ್ದಾರೆ. ಈ ಕುರಿತು ತಮ್ಮ ಸೋಷಿಯಲ್‌ ಮೀಡಿಯಾ ಖಾತೆಗಳಲ್ಲಿ ವಿಸ್ತೃತ ಪೋಸ್ಟ್‌ ಹಂಚಿಕೊಂಡಿದ್ದಾರೆ.

ತೆಲಂಗಾಣದ ರಾಜಧಾನಿ ಹೈದರಾಬಾದ್‌ನಲ್ಲಿ ವಾಸವಿರುವ ಸಿಂಧು, ತಮ್ಮವರೊಂದಿಗೆ ಕೊಡಗಿಗೆ ಬಂದು ಕೆಲವು ದಿನಗಳ ಕಾಲ ಅಲ್ಲಿಯೇ ಉಳಿದಿದ್ದರು. ಇಲ್ಲಿನ ಕಾಫಿ ಎಸ್ಟೇಟ್‌ನಲ್ಲಿ ಸುತ್ತಾಡಿದ ಸಿಂಧು, ಕೊಡಗಿನ ಪರಿಸರದಲ್ಲಿ ಕಾಫಿ ರುಚಿ ಸವಿದಿದ್ದಾರೆ. ಅಷ್ಟೇ ಅಲ್ಲ ಬಗೆಬಗೆಯ ಪಕ್ಷಿಸಂಕುಲವನ್ನು ಕಂಡು ಖುಷಿಪಟ್ಟಿದ್ದಾರೆ. ಹೈದರಾಬಾದ್‌ನಲ್ಲಿ ಬೆಚ್ಚಗಿನ ಪರಿಸರಲ್ಲಿ ಓಡಾಡುತ್ತಿದ್ದ ಆಟಗಾರ್ತಿ ಕೂರ್ಗ್‌ನ ತಂಪಾದ ಪರಿಸ...