Mysuru, ಮೇ 4 -- ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸಚಿವರಾದ ನಿತಿನ್ ಗಡ್ಕರಿ ಅವ ರಿಂದ 2018ರಲ್ಲೇ ಅನುಮೋದನೆ ಪಡೆದುಕೊಂಡು 2023, ಮಾರ್ಚ್ 12ರಂದು ಚಾಲನೆ ದೊರೆತಿದ್ದು ಕುಶಾಲನಗರ ಚತುಷ್ಪಥ ಕಾಮಗಾರಿ ಈಗ ಶುರುವಾಗಿದೆ.

ಬೆಂಗಳೂರು-ಮೈಸೂರು ಹೈವೇ ಉದ್ಘಾಟನೆ ದಿನವೇ ಗೆಜ್ಜಲಗೆರೆಯಲ್ಲಿ ಪ್ರಧಾನಿ ಮೋದೀ ಅವರಿಂದ ಭೂಮಿ ಪೂಜೆ ಮಾಡಿಸಿದ ಮೈಸೂರು-ಕುಶಾಲನಗರ ಚತುಷ್ಪಥ ಹೆದ್ದಾರಿಯ ಕಾಮಗಾರಿ ಇದೇ ಏಪ್ರಿಲ್ ನಲ್ಲಿ ಆರಂಭವಾಗಿದೆ

ಒಟ್ಟು 92 ಕಿಮೀ ಹೆದ್ದಾರಿ ನಿರ್ಮಾಣ ಕಾಮಗಾರಿಯಲ್ಲಿ 4 ಪ್ಯಾಕೇಜ್ ಗಳಿದ್ದು ತ್ವರಿತಗತಿಯಲ್ಲಿ ಈ ರಸ್ತೆ ವಿಸ್ತರಣೆ ಕೆಲಸ ಮುಗಿಸುವ ನಿರೀಕ್ಷೆಯಿದೆ.

ಪ್ಯಾಕೇಜ್ -5 ರಡಿ ಬಿ ಅಗ್ರಹಾರ( ಶ್ರೀರಂಗಪಟ್ಟಣ) ದಿಂದ ಯಲಚಹಳ್ಳಿ (ಮೈಸೂರು ತಾಲೂಕು) 19 ಕಿಮೀ ಮತ್ತು ಪ್ಯಾಕೇಜ್-3 ಹುಣಸೂರು ತಾಲೂಕಿನ ಬೆಳತ್ತೂರುನಿಂದ ಪಿರಿಯಾಪಟ್ಟಣ ತಾಲೂಕಿನ ಹರವೆಮಲ್ಲಿರಾಜಪಟ್ಟಣ ವರೆಗಿನ 24.10 ಕಿಮೀ) ಕಾಮಗಾರಿ ವೇಗವಾಗಿ ನಡೆಯುತ್ತಿದೆ

ಪ್ಯಾಕೇಜ್-4 ಸದ್ಯದಲ್ಲೇ ಆರಂಭವಾಗಲಿದ್ದು, ಪ್ಯಾಕೇಜ್-2 ಅರಣ್ಯ ಇಲಾಖೆಯ ಅ...