Bengaluru, ಏಪ್ರಿಲ್ 24 -- ದೊಡ್ಮನೆ ಕುಡಿ, ಡಾ. ರಾಜ್‌ಕುಮಾರ್‌ ಅವರ ಮೊಮ್ಮಗ, ರಾಘವೇಂದ್ರ ರಾಜ್‌ಕುಮಾರ್‌ ಅವರ ಕಿರಿ ಮಗ ಯುವ ರಾಜ್‌ಕುಮಾರ್‌ ಇದೀಗ ʻಎಕ್ಕʼ ಮೂಲಕ ಸದ್ದು ಆರಂಭಿಸಿದ್ದಾರೆ. ಅಂದರೆ ʻಎಕ್ಕʼ ಚಿತ್ರದ ಮೊದಲ ಟೀಸರ್‌ ಬಿಡುಗಡೆ ಆಗಿದೆ. ಎಲ್ಲ ಎಂದುಕೊಂಡಂತೆ ಆಗಿದ್ದರೆ ಏಪ್ರಿಲ್‌ 23ರ ಯುವ ರಾಜ್‌ಕುಮಾರ್‌ ಬರ್ತ್‌ಡೇ ದಿನವೇ ಈ ಟೀಸರ್‌ ಬಿಡುಗಡೆ ಆಗಬೇಕಿತ್ತು. ಆದರೆ, ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರ ಅಟ್ಟಹಾಸಕ್ಕೆ ಸಾಕಷ್ಟು ಜನ ಅಸುನೀಗಿದ್ದರು. ಆ ಹಿನ್ನೆಲೆಯಲ್ಲಿ ಒಂದು ದಿನ ಮುಂದೂಡಿ, ಇಂದು (ಏ.14) ತಾತನ ಬರ್ತ್‌ಡೇ ದಿನವೇ ಟೀಸರ್‌ ರಿಲೀಸ್‌ ಆಗಿದೆ.

1 ನಿಮಿಷ 9 ಸೆಕೆಂಡ್‌ ಇರುವ ʻಎಕ್ಕʼ ಟೀಸರ್‌ ಸಖತ್‌ ಕಲರ್‌ಫುಲ್‌ ಆಗಿದೆ. ಹೊಸ ಅವತಾರದಲ್ಲಿ ಯುವರಾಜ್‌ ಕುಮಾರ್‌ ಎಂಟ್ರಿ ಕೊಟ್ಟಿದ್ದಾರೆ. ಮಗು-ಮೃಗ ಅಂತಾ ಮಸ್ತ್‌ ಡೈಲಾಗ್‌ ಹೊಡೆಯುತ್ತಾ ಕೈಯಲ್ಲಿ ಪೊರಕೆ ಹಿಡಿದು ವಿಭಿನ್ನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನೊಂದ್ ವಿಷ್ಯ.. ಇದು ಇಲ್ಲಿಗೆ ನಿಲ್ಲೋದಿಲ್ಲ ಅಂತಾ ದೊಡ್ಡದಾಗಿ ಏನೋ ಸೂಚನೆ ಕೊ...