Bengaluru, ಮಾರ್ಚ್ 22 -- Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯ ಶುಕ್ರವಾರ ಮಾರ್ಚ್ 21ರ ಸಂಚಿಕೆಯಲ್ಲಿ ತನ್ವಿಗೆ ಗೆಳತಿಯರ ಜತೆ ರೆಸಾರ್ಟ್‌ಗೆ ಟ್ರಿಪ್ ಹೋಗುವುದೇ ದೊಡ್ಡ ಸಮಸ್ಯೆಯಾಗಿದೆ. ಮನೆಯಲ್ಲಿ ಅನುಮತಿ ಸಿಗದಿರುವುದು ಒಂದೆಡೆಯಾದರೆ, ಮತ್ತೊಂದೆಡೆ ಅಮ್ಮ ಅನುಮತಿ ನೀಡುತ್ತಾರೋ ಇಲ್ಲವೋ, ಅಜ್ಜಿ ಮತ್ತು ತಾತ ಏನು ಹೇಳುತ್ತಾರೆ ಎನ್ನುವುದೇ ಅವಳಿಗೆ ಈಗ ಕಿರಿಕಿರಿ ಅನ್ನಿಸಿದೆ. ಹೀಗಾಗಿ ಅವಳು ಅಜ್ಜಿ ಕುಸುಮಾ ಮತ್ತು ಪೂಜಾ ಒಟ್ಟಿಗೆ ಇರುವಾಗ ಮೆಲ್ಲನೇ ಹೋಗಿ ಅನುಮತಿ ಕೇಳಿದ್ದಾಳೆ. ಆದರೆ ಅಜ್ಜಿ ಕುಸುಮಾ, ಅವಳ ಮಾತು ಕೇಳುತ್ತಲೇ ಕೋಪಗೊಂಡಿದ್ದಾರೆ. ನೀವು ಹುಡುಗಿಯರೇ ಸೇರಿಕೊಂಡು ಎಲ್ಲಿಗೂ ಹೋಗುವುದು ಬೇಡ. ಸುಮ್ಮನೆ ಮನೆಯಲ್ಲಿ ಬಿದ್ದಿರು ಎಂದು ಜೋರು ಮಾಡುತ್ತಾರೆ.

ಅಜ್ಜಿಯ ಮಾತು ಕೇಳಿ ತನ್ವಿಗೆ ಬೇಸರವಾಗಿದೆ, ಇವರ ಬಳಿ ಮಾತನಾಡಿ ಪ್ರಯೋಜನವಿಲ್ಲ ಎಂದು ಮತ್ತೆ ಅಮ್ಮನ ಬಳಿ ತೆರಳುತ್ತಾಳೆ. ಅಮ್ಮನ ಜೊತೆ ಹಾಗೇ ಮಾತನಾಡುತ್ತಾ, ಅವರನ್ನು ಮಾತಿಗೆ ಎಳೆಯುತ್ತಾಳೆ. ನಂತರ ಮೆಲ್ಲನೆ, ನನಗೆ ಈಗ ರೆಸಾರ್ಟ್ ಪ್ರವ...