Bengaluru, ಮಾರ್ಚ್ 23 -- Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯ ಕಥಾ ನಾಯಕಿ ಭಾಗ್ಯ, ರೆಸಾರ್ಟ್‌ನಲ್ಲಿ ಕುಣಿಯುವ ಕೆಲಸ ಮಾಡುತ್ತಿದ್ದಳು. ಈಗ ಅದನ್ನೂ ಕಳೆದುಕೊಂಡಿದ್ದಾಳೆ. ಮುಂದೇನು ಮಾಡಬೇಕು ಎಂದು ಅವಳು ಅಂದುಕೊಂಡಿರುವಾಗ ಅವಳಿಗೆ ಹೊಳೆದದ್ದು, ಮನೆಯಲ್ಲೇ ಅಡುಗೆ ಮಾಡಿ, ಅದನ್ನು ಹಾಸ್ಟೆಲ್ ಹುಡುಗರಿಗೆ ತಲುಪಿಸುವ ಕೆಲಸ. ಮನೆಯಲ್ಲೇ ತಿಂಡಿ, ಊಟ ತಯಾರಿಸಿ, ಅದನ್ನು ಡಬ್ಬಾಗೆ ಹಾಕಿ, ಹಾಸ್ಟೆಲ್, ಮತ್ತು ಕಚೇರಿಗಳಲ್ಲಿ ಅಗತ್ಯವಿರುವವರಿಗೆ ಕೊಡುವ ಕೆಲಸಕ್ಕೆ ಮನೆಯವರು ಎಲ್ಲರೂ ಮೆಚ್ಚುಗೆ ಸೂಚಿಸಿದ್ದಾರೆ. ಆರಂಭದಲ್ಲಿ ಅವರು ಬೇಡ ಎಂದರೂ, ನಂತರ ಭಾಗ್ಯಗೆ ಬೆಂಬಲ ನೀಡಲು ಮುಂದಾಗಿದ್ದಾರೆ. ಕೊನೆಗೂ ಭಾಗ್ಯಗೆ ಮತ್ತೊಂದು ಹೊಸ ದಾರಿ ತೆರೆದುಕೊಂಡಿದೆ.

ಒಂದೆಡೆ ಮಗಳು ತನ್ವಿ ಕಾಲೇಜ್ ಗೆಳತಿಯರ ಜತೆ ರೆಸಾರ್ಟ್‌ಗೆ ಟ್ರಿಪ್ ಹೋಗಬೇಕು ಎಂದುಕೊಂಡರೆ ಅದು ಸಾಧ್ಯವಾಗಿಲ್ಲ. ಅದಕ್ಕೆ ಭಾಗ್ಯ ಮತ್ತು ಮನೆಯವರು ಅನುಮತಿ ಕೊಟ್ಟಿಲ್ಲ. ಮತ್ತೊಂದೆಡೆ ಮಗ ತನ್ಮಯ್, ಅಮ್ಮನಿಗೆ ಸಹಾಯವಾಗಲಿ ಎಂದು ಸ್ಕೂಲ್‌ಗೂ ಹೋಗದೇ, ಕ್ಲಾಸ್ ಬ...